ವಿದ್ಯಾರ್ಥಿನಿಯರ ಒಳ ಉಡುಪು ಕಳಚಿಸಿ ‘ನೀಟ್’ ಪರೀಕ್ಷೆ: ಮತ್ತಿಬ್ಬರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರೀ ಸುದ್ದಿ ಮಾಡಿದ್ದ ವಿದಾಯರ್ಥಿನಿಯರ ಒಳ ಉಡುಪಿ ಕಳಚಿಸಿ ‘ನೀಟ್’ ಪರೀಕ್ಷೆ ಬರೆಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಪರೀಕ್ಷಾ ಮೇಲ್ವಿಚಾರರಿಬ್ಬರನ್ನು ಬಂಧಿಸಲಾಗಿದೆ.

ಕೇರಳದಲ್ಲಿ ನಡೆದಿದ್ದ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪೊಷಕರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿದ್ದು, ವ್ಯಾಪಕ ವಿಚಾರಣೆಗೆ ಒಳಪಡಿಸಿದ ಬಳಿಕ ನೀಟ್ ವೀಕ್ಷಕ ಮತ್ತು ಪರೀಕ್ಷಾ ಸಂಯೋಜಕರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!