Monday, August 8, 2022

Latest Posts

ನೇತಾಜಿ ಹೋರಾಟಗಳಿಗೆ ಸಹಕಾರ ನೀಡಿದ್ದ ಸ್ವಾತಂತ್ರ್ಯ ಸೇನಾನಿ ರತ್ನಂ

ಹೊಸದಿಗತ ಡಿಜಿಟಲ್‌ ಡೆಸ್ಕ್‌ 
ರತ್ನಂ ಅವರು ಪೋರ್ಟ್ ಬ್ಲೇರ್‌ನ 1899ರ ಡಿಸೆಂಬರ್ 10 ರಂದು  ಜನಿಸಿದರು.
ಎರಡನೆಯ ಮಹಾಯುದ್ಧದ ಸಮಯದಲ್ಲಿ, ಜಪಾನಿಯರು ಮಾರ್ಚ್ 1942 ರಲ್ಲಿ ಅಂಡಮಾನ್ ದ್ವೀಪಗಳನ್ನು ಆಕ್ರಮಿಸಿಕೊಂಡರು. ಅದೇ ಸಂದರ್ಭದಲ್ಲಿ ದ್ವೀಪವಾಸಿಗಳು 1942 ರ ಏಪ್ರಿಲ್‌ ನಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (IIL) ಶಾಖೆಯನ್ನು ಬಾರ್ನ್ ಅಸೋಸಿಯೇಷನ್‌ನ ಕಚೇರಿಯ ಆವರಣದಲ್ಲಿ ರಚಿಸಿದರು. ಅಬರ್ಡೀನ್‌ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಗಳಿಗಾಗಿ ರಾಶ್ ಬಿಹಾರಿ ಬೋಸ್ ಸ್ಥಾಪಿಸಿದ ಈ ಲೀಗ್‌ನ ಖಜಾಂಚಿಯಾಗಿ ರತ್ನಂ ಅವರು ಆಯ್ಕೆಯಾದರು. ಅಂಡಮಾನ್ ದ್ವೀಪಗಳಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ನ ವಿಸ್ತರಣೆಗೆ ಕೊಡುಗೆ ನೀಡಿದ ಸಕ್ರಿಯ ಸದಸ್ಯರಲ್ಲಿ ಅವರು ಒಬ್ಬರಾಗಿದ್ದರು.
1943 ರ ಡಿಸೆಂಬರ್ 29 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಪೋರ್ಟ್ ಬ್ಲೇರ್‌ನ ಲಂಬಾ ಲೈನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಮರುದಿನ ನೇತಾಜಿ ಜಿಮ್ಖಾನಾ ಮೈದಾನದಲ್ಲಿ ಮೊದಲ ಬಾರಿಗೆ ಭಾರತೀಯ ಧ್ವಜವನ್ನು ಹಾರಿಸಿದರು. ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ ಸದಸ್ಯರು ಇದರಲ್ಲಿ ಭಾಗಿಯಾಗಿ ಸ್ವಾತಂತ್ರ್ಯ ಭಾರತದ ಉದ್ಘೋಷಗಳನ್ನು ಮಾಡಿದರು. ಪೋರ್ಟ್ ಬ್ಲೇರ್‌ನ ಲಂಬಾ ಲೈನ್ ವಿಮಾನ ನಿಲ್ದಾಣದಲ್ಲಿ ಹಾಗೂ ಜಿಮ್ಖಾನಾ ಮೈದಾನದಲ್ಲಿ ನೇತಾಜಿಯನ್ನು ಬರಮಾಡಿಕೊಂಡ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ನ ಪ್ರಮುಖ ಸದಸ್ಯರಲ್ಲಿ ರತ್ನಂ ಒಬ್ಬರು. ಅದೇ ದಿನ ನೇತಾಜಿ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದ್ದರು. 31 ಡಿಸೆಂಬರ್ 1943 ರಂದು ನೇತಾಜಿ ಅವರು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ನ ಪ್ರಧಾನ ಕಛೇರಿಯಾಗಿದ್ದ ಬ್ರೌನಿಂಗ್ ಕ್ಲಬ್‌ಗೆ ಭೇಟಿ ನೀಡಿದರು.
ರತ್ನಂ ಅವರು ಇಲ್ಲಿ ಕಾರ್ಯನಿರ್ವಹಿಸುವವರೆಗೂ ಆಜಾದ್ ಹಿಂದ್ ಸರ್ಕಾರದ ಎಲ್ಲಾ ಚಟುವಟಿಕೆಗಳಿಗೆ ಕೆಲಸ ಮತ್ತು ಕೊಡುಗೆಯನ್ನು ಮುಂದುವರೆಸಿದರು. ಅವರು 1970 ರಲ್ಲಿ ನಿಧನರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss