ಜಮ್ಮು- ಕಾಶ್ಮೀರದೊಳಗೆ ನುಸುಳಲು 150 ಭಯೋತ್ಪಾದಕರು ಸಜ್ಜು??

ಹೊಸದಿಗಂತ ಆನ್‌ಲೈನ್ ಡೆಸ್ಕ್:
ಎಲ್‌ಒಸಿ ಗಡಿಯಿಂದ ಜಮ್ಮು- ಕಾಶ್ಮೀರದೊಳಗೆ ನುಸುಳಲು 150 ಭಯೋತ್ಪಾದಕರು ಸಜ್ಜಾಗಿದ್ದು, 500ರಿಂದ 700 ಉಗ್ರರು ಪಾಕಿಸ್ಥಾನದ ಉಗ್ರತಾಣಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಈ ಬಗ್ಗೆ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಪಾಕ್ ಗಡಿಯ ಮನ್‌ಶೇರಾ, ಕೊಟ್ಳಿ ಮತ್ತು ಮುಜ್ಜರಫರಬಾದ್ ಪ್ರದೇಶಗಳಲ್ಲಿನ ಉಗ್ರರ ತಾಣಗಳಲ್ಲಿ ಸುಮಾರು 500 ರಿಂದ 700 ಭಯೋತ್ಪಾದಕರು ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಅಂದಾಜು 150 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಸಜ್ಜಾಗಿದ್ದಾರೆ. ಆದರೆ, ಈವರೆಗೂ ಉಗ್ರರು ಗಡಿ ನುಸುಳುವ ಪ್ರಯತ್ನವನ್ನು ಭಾರತೀಯ ಸೇನೆ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.
ಗಡಿ ನುಸುಳುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆಂದು ಹೇಳಲು ಸಾಧ್ಯವಿಲ್ಲ. ಆದರೆ, ಇತ್ತೀಚೆಗೆ ಸೇನೆ ಕೈಗೊಂಡ ಕ್ರಮಗಳು, ಅತ್ಯಾಧುನಿಕ ಉಪಕರಣಗಳ, ಕಣ್ಗಾವಲು ಕ್ಯಾಮೆರಾಗಳ ಹಾಗೂ ಸುಭದ್ರ ಬೇಲಿ ಅಳವಡಿಕೆಯಿಂದ ಗಡಿಯೊಳಗೆ ಉಗ್ರರ ಪ್ರವೇಶ ಗಣನೀಯವಾಗಿ ಕಡಿಮೆಯಾಗಿದೆ ಎದಿರುವ ಅವರು, ಇತರೆ ಗಡಿ ಪ್ರದೇಶಗಳಿಗೆ ಹೋಲಿಸಿದರೆ, ಕಾಶ್ಮೀರ ಕಣಿವೆ ಪ್ರವೇಶದಲ್ಲಿ ಉಗ್ರರ ನುಸುಳುವಿಕೆ ಬಹಳಷ್ಟು ಕಡಿಮೆಯಾಗಿದೆ. ಈ ನಡುವೆ ಭಯೋತ್ಪಾದಕರು ರಾಜೌರಿ-ಪೂಂಚ್ ಮತ್ತು ಪಿರ್ ಪಂಜಾಲ್ ಮಾರ್ಗಗಳಲ್ಲಿ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ನೇಪಾಳದ ಮೂಲಕವೂ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!