September 27, 2026
Sunday, September 27, 2026
spot_img

ಮತ್ತೊಮ್ಮೆ ಅವಕಾಶ ಪಡೆದ ನೀಟ್ ಅಭ್ಯರ್ಥಿಗಳು: ಜೂನ್ 21ಕ್ಕೆ NEET UG ಮರುಪರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್ ಯುಜಿ 2026 ಮರುಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 21ರಂದು ದೇಶಾದ್ಯಂತ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಪ್ರಕ್ರಿಯೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸಲು ಈ ಬಾರಿ ಹಲವು ವಿಶೇಷ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಹೆಚ್ಚುವರಿ ಸಮಯದ ವ್ಯವಸ್ಥೆ

ವಿದ್ಯಾರ್ಥಿಗಳ ಸಮಯದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪರೀಕ್ಷಾ ಅವಧಿಗೆ ಹೆಚ್ಚುವರಿ 15 ನಿಮಿಷಗಳನ್ನು ನೀಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರವರೆಗೆ ಪರೀಕ್ಷೆ ನಡೆಯಲಿದ್ದು, ಪ್ರಶ್ನೆಗಳನ್ನು ಸಮಾಧಾನದಿಂದ ಓದಿ ಉತ್ತರಿಸಲು ಅವಕಾಶ ಕಲ್ಪಿಸಲಾಗಿದೆ.

ಜೂನ್ 14ರಂದು ಹಾಲ್ ಟಿಕೆಟ್ ಬಿಡುಗಡೆ

ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಜೂನ್ 14ರಂದು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ:

ರಫ್ ವರ್ಕ್‌ಗೆ ಹೆಚ್ಚುವರಿ ಜಾಗ

ಪ್ರಶ್ನೆಪತ್ರಿಕೆಯಲ್ಲಿ ರಫ್ ವರ್ಕ್ ಮಾಡಲು ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಾಗಿದ್ದು, ಲೆಕ್ಕಾಚಾರ ಹಾಗೂ ಟಿಪ್ಪಣಿಗಳನ್ನು ಸುಲಭವಾಗಿ ಬರೆಯಲು ಅನುಕೂಲವಾಗಲಿದೆ.

ಹಾಲ್ ಟಿಕೆಟ್ ಡೌನ್‌ಲೋಡ್ ವಿಧಾನ

ಮೊದಲು NTA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಭ್ಯರ್ಥಿ ಚಟುವಟಿಕೆ ವಿಭಾಗದಲ್ಲಿರುವ NEET UG 2026 ಮರುಪರೀಕ್ಷೆಯ ಲಿಂಕ್ ಆಯ್ಕೆ ಮಾಡಬೇಕು. ನಂತರ ಲಾಗಿನ್ ವಿವರಗಳನ್ನು ನಮೂದಿಸಿದರೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಸುಮಾರು 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ. ಪರೀಕ್ಷಾ ದಿನದಂದು ಪ್ರವೇಶ ಪತ್ರದ ಜೊತೆಗೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವಂತೆ ಎನ್‌ಟಿಎ ಸೂಚಿಸಿದೆ.

Must Read