Wednesday, October 5, 2022

Latest Posts

ಭಾರತ-ನ್ಯೂಜಿಲೆಂಡ್‌ ಹುಬ್ಬಳ್ಳಿ ಟೆಸ್ಟ್‌ ಪಂದ್ಯಕ್ಕೆ ವರುಣನ ಅಡ್ಡಿ: ಪಂದ್ಯ ಪ್ರಾರಂಭದಲ್ಲಿ ವ್ಯತ್ಯಯ

ಹೊಸದಿಗಂತ ವರದಿ ಹುಬ್ಬಳ್ಳಿ:

ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆಯ ಬೇಕಾದ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ ಟೆಸ್ಟ್ ಪಂದ್ಯ ಮೈದಾನ ತೇವಾಂಶವಿರುವ ಕಾರಣ ಪಂದ್ಯದ ಸಮಯ ಮುಂದುಡಲಾಗಿದೆ.

ಬೆಳಿಗ್ಗೆ ೯.೩೦ ಕ್ಕೆ ಆರಂಭವಾಗಬೇಕಾದ ಪಂದ್ಯ ಬುಧವಾರ ರಾತ್ರಿ ಮಳೆಯಾದ ಕಾರಣ ಮೈದಾನ ತೇವಾಂಶ ಇರುವ ಕಾರಣ ಮಧ್ಯಾಹ್ನ ೧ ಗಂಟೆ ಆರಂಭಿಸಲು ನಿರ್ಧರಿಸಿದ್ದಾರೆ.

ಅಭಿಮಾನಿಗಳ ದಂಡು: ಮೂರು ವರ್ಷದ ಬಳಿಕ ಕೆಎಸ್ ಸಿಎ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಪಂದ್ಯ ವೀಕ್ಷಣೆಗೆ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಬಂದಿದ್ದು ಪಂದ್ಯ ವೀಕ್ಷಣೆಗೆ ಕಾತರರಾಗಿದ್ದಾರೆ.

ಇನ್ನೂ ವಿದ್ಯಾರ್ಥಿಗಳು ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡ ಆಟಗಾರರಿಂದ ಆಟೋಗ್ರಾಫ್ ಹಾಗೂ ಸೇಲ್ಫಿ ಪಡೆಯಲು ಮುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಉಭಯ ತಂಡದ ಆಟಗಾರರು ವಿದ್ಯಾರ್ಥಿಗಳಿಗೆ ಸೇಲ್ಫಿ ನೀಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಸೇಲ್ಫಿ ಪಡೆದು ಖಷಿಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!