ವಿಮಾನ ದುರಂತದಲ್ಲಿ ಹೃದಯ ವಿದ್ರಾವಕ ಘಟನೆ: ಸಾವಿಗೂ ಮುನ್ನ ಟಿಕ್‌ ಟಾಕ್‌ ವಿಡಿಯೋ ಮಾಡಿದ್ದ ಗಗನಸಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇಪಾಳದಲ್ಲಿ ಭೀಕರ ವಿಮಾನ ಅಪಘಾತದಲ್ಲಿ 72 ಮಂದಿ ಅಮಾಯಕರು ಜೀವ ತೆತ್ತಿದ್ದಾರೆ. ಈ ಅಪಘಾತ ಹಲವು ಕುಟುಂಬಗಳಲ್ಲಿ ದುಃಖವನ್ನು ತುಂಬಿದೆ. ಈ ಘಟನೆಯಲ್ಲಿ ಮತ್ತೊಂದು ಹೃದಯ ವಿದ್ರಾವಕ ದುರಂತ ಬೆಳಕಿಗೆ ಬಂದಿದೆ. ಅದೇ ವಿಮಾನದಲ್ಲಿ ಟಿಕ್ ಟಾಕ್ ವೀಡಿಯೋ ಮಾಡಿದ ಗಗನಸಖಿ ಪ್ರಾಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಪತನಗೊಂಡ ವಿಮಾನದ ಸಿಬ್ಬಂದಿಯಲ್ಲಿ ಒಬ್ಬ ಗಗನಸಖಿಯೂ ಇದ್ದರು. ಆ ಗಗನಸಖಿಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ಅಪಘಾತಕ್ಕೂ ಮುನ್ನ ಆಕೆ ಟಿಕ್ ಟಾಕ್ ವಿಡಿಯೋ ತೆಗೆದಿದ್ದಾಳೆ. ಇದು ತನ್ನ ಕೊನೆಯ ವಿಮಾನ ಪ್ರಯಾಣ ಎಂದು ತಿಳಿಯದ ಗಗನಸಖಿ ಒಸಿನ್ ಪ್ರಯಾಣಿಕರು ವಿಮಾನ ಹತ್ತುವ ಮುನ್ನವೇ ಸೆಲ್ಫಿ ವಿಡಿಯೋ ಮಾಡಿದ್ದಾರೆ. ನಗುತ್ತಾ, ಸಂತೋಷದಿಂದ ವಿಡಿಯೋ ಮಾಡಿದ್ದು, ಕೆಲ ಗಂಟೆಗಳಲ್ಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ.

ವಿಮಾನ ಪತನಗೊಂಡ ಬಳಿಕ ಎಚ್ಚೆತ್ತ ಅಧಿಕಾರಿಗಳು ಪ್ರಯಾಣಿಕರನ್ನು ರಕ್ಷಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಪ್ರಯಾಣಿಕರೆಲ್ಲರೂ ಸಜೀವ ದಹನವಾಗಿದ್ದಾರೆ. ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡ ವಿಮಾನ ನೆಲಕ್ಕೆ ಅಪ್ಪಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!