Saturday, February 4, 2023

Latest Posts

ಅತ್ಯಾಚಾರ ಪ್ರಕರಣ: ಮೂರು ಆರೋಪಿಗಳ ಬಂಧನ

ಹೊಸದಿಗಂತ ವರದಿ,ವಿಜಯಪುರ:

ನಗರದಲ್ಲಿ ಯುವತಿಯೊಬ್ಬಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ, ಅವಳ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ ಘಟನೆಗೆ ಸಂಬಂಧಿಸಿದಂತೆ ಮೂವರು ಯುವಕರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಹೇಳಿದರು.

ನಗರದಲ್ಲಿ ಸೋಮವಾರ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಅಯಾಜ್ ಅಹಮ್ಮದ್ ಜಮಾದಾರ, ಉಮರ್ ಪಾರೂಕ್ ಹಾಗೂ ರಾಹಿಲ್ ಶೇಖ್ ಬಂಧಿತ ಆರೋಪಿಗಳು ಎಂದರು.

ಜ.17 ರಂದು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರಾತ್ರಿ ಬಸ್‌‌ಗಾಗಿ ಯುವತಿ ಕಾಯುತ್ತಿದ್ದಳು. ಈ ವೇಳೆ ಆರೋಪಿಗಳು ಯುವತಿಯನ್ನು ಪುಸಲಾಯಿಸಿ ತಮ್ಮ ಬೈಕ್ ನಲ್ಲಿ ಯುವತಿಯನ್ನು ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಕರೆದುಕೊಂಡು ಹೋಗಿ, ಮೂರು ಆರೋಪಿಗಳ ಪೈಕಿ ಓರ್ವ ಯುವತಿ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ ಬಳಿಕ ಮೂರು ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿ, ಮೂವರನ್ನು ಬಂಧಿಸಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!