Monday, October 2, 2023

Latest Posts

SHOCKING VIDEO| ಕೈಗಾರಿಕಾ ಪಾರ್ಕ್‌ನಲ್ಲಿ ಭಾರೀ ಅಗ್ನಿ ದುರಂತ: ಮುಗಿಲೆತ್ತರಕ್ಕೆ ಚಿಮ್ಮಿದ ಜ್ವಾಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೈಗಾರಿಕಾ ಉದ್ಯಾನವನದಲ್ಲಿ ಭೀಕರ ಅಗ್ನು ಅನಾಹುತ ಉಟಾಗಿದ್ದು, ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಘಟನೆ ನೆದರ್ಲ್ಯಾಂಡ್‌ನ ಟೆರ್ ನಗರದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಕ್ರಮೇಣ ಬೆಂಕಿ ವ್ಯಾಪಿಸಿ ಹಲವು ಕಟ್ಟಡಗಳನ್ನು ಆವರಿಸಿದೆ.

ಮಾಹಿತಿ ಲಭಿಸಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ತುಂಬಾ ತೀವ್ರವಾಗಿದೆ ಎಂದು ಹೇಳಲಾಗಿದ್ದು, ಅದನ್ನು ನಂದಿಸಲು ಗಂಟೆಗಳು ಬೇಕಾಗಬಹುದು. ಬೆಂಕಿಯ ನಂತರ ಸ್ಫೋಟಗಳು ಸಹ ಕೇಳಿಬಂದವು ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ NOS ವರದಿ ಮಾಡಿದೆ. ಫೋರ್ಕ್‌ಲಿಫ್ಟ್ ಟ್ರಕ್‌ಗಳ ಗ್ಯಾಸ್ ಸಿಲಿಂಡರ್‌ಗಳು ಬ್ಲಾಸ್ಟ್‌ ಆಗಿರುವ ಸದ್ದು ಕೇಳಿಬಂದಿದೆ.

ಬೆಂಕಿಯ ಹಲವಾರು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇಡೀ ಪ್ರದೇಶವು ಬೆಂಕಿಯಲ್ಲಿ ಮುಳುಗಿದೆ. ಕೆಲವು ಅಡಿ ಎತ್ತರಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅದರಿಂದ ಹೊಮ್ಮಿದ ಹೊಗೆ ಇಡೀ ಆಕಾಶವನ್ನೇ ಆವರಿಸಿಕೊಂಡಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲಾಯಿತು. ಬೆಂಕಿಯಿಂದಾಗಿ ಜನರು ಭಯಭೀತರಾಗಿದ್ದಾರೆ. ಸುತ್ತಲೂ ಜನರ ಆರ್ತನಾದ ಕೇಳಿಬರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!