Tuesday, June 28, 2022

Latest Posts

ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಬಾಲಿವುಡ್‌ ನಟ: ನೆಟ್ಟಿಗರ ಕೆಂಗಣ್ಣಿಗೆ ಗುರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಭಾರತದ ಸಿನಿಮಾಗಳ ಯಶಸ್ಸಿನಿಂದಾಗಿ ಕೆಲ ಬಾಲಿವುಡ್‌ ಮಂದಿ ಸೌತ್‌ ಕಡೆ ಮುಖ ಮಾಡುತ್ತಿದ್ದರೆ, ಇನ್ನೂ ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ನಾಯಕ ಜಾನ್ ಅಬ್ರಹಾಂ ಕೂಡ ಇದ್ದಾರೆ. ಮೊನ್ನೆ ಅಟ್ಯಾಕ್ ಚಿತ್ರದ ಪ್ರಚಾರದ ವೇಳೆ ಜಾನ್ ಅಬ್ರಹಾಂ ಸೌತ್ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ನಾನು ಅಲ್ಲಿನ ಸಿನಿಮಾಗಳಲ್ಲಿ ನಟಿಸುವುದಿಲ್ಲ, ನಾನು ಹಿಂದಿ ಸ್ಟಾರ್, ಬಾಲಿವುಡ್ ಸ್ಟಾರ್ ಎಂದ ಮಾತುಗಳು ದಕ್ಷಿಣ ಭಾರತದ ಟ್ರೋಲಿಗರಿಗೆ ಆಹಾರವಾಗಿದ್ದವು. ಇದೀಗ ಸೌತ್‌ ಅಲ್ಲದೆ ನಾರ್ತ್‌ ಟ್ರೋಲಿಗರ ಬಾಯಿಗೂ ತುತ್ತಾಗುವ ಕಮೆಂಟ್‌ ಮಾಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಪ್ರಸ್ತುತ ಜಾನ್ ಏಕ್ ವಿಲನ್ ರಿಟರ್ನ್ಸ್ ಚಿತ್ರದ ಪ್ರಚಾರಗಳಲ್ಲಿ ನಿರತರಾಗಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ ಜಾನ್, “ನಾನು ದೊಡ್ಡ ಪರದೆಯ ನಾಯಕ. ನಾನು ನನ್ನ ಸಿನಿಮಾಗಳನ್ನು ಬೆಳ್ಳಿತೆರೆಯಲ್ಲಿ ನೋಬೇಕೆಂದಿದ್ದೇನೆ. ಪ್ರೇಕ್ಷಕರು ಕೂಡಾ ನನ್ನನ್ನು ಥಿಯೇಟರ್‌ನಲ್ಲಿ ನೋಡಬೇಕು ಎಂದು ನಾನು ಬಯಸುತ್ತೇನೆ. OTT ಯಲ್ಲಿ ತಿಂಗಳಿಗೆ 200, 400 ಕ್ಕೆ ಎಲ್ಲರಿಗೂ ಲಭ್ಯವಾಗಲು ನಾನು ಬಯಸುವುದಿಲ್ಲ, ಎಂದಿರುವ ಮಾತುಗಳು ಇದೀಗ ನೆಟ್ಟಿಗರ ಕೋಪಕ್ಕೆ ಗುರಿಯಾಗಿವೆ.

ಈ ಬಾರಿ ಉತ್ತರ ಭಾರತ ನೆಟ್ಟಿಗರು ಕೂಡ ಟ್ರೋಲ್ ಮಾಡಿದ್ದು, ಸ್ಟಾರ್ ಹೀರೋಗಳೇ OTT ಗಾಗಿ ಪ್ರತ್ಯೇಕವಾಗಿ ಸಿನಿಮಾ ಮಾಡುತ್ತಿದ್ದಾರೆ. ನೀವು ಅವರಿಗಿಂತ ಸ್ಟಾರ್‌ ನಾಯಕನಾ..? ಜನರಿಂದ ಹಣ ಹೇಗೆ ವಸೂಲಿ ಮಾಡಬೇಕೆಂಬುದರ ಬಗ್ಗೆ ಯೋಚನೆ ಮಾಡುತ್ತಿದ್ದಿರಾ..? ನಿಮ್ಮನ್ನು ನೀವು ದೊಡ್ಡ ಸ್ಟಾರ್ ಅಂತ ತಿಳಿದರೆ ಅದು ನಿಮ್ಮ ಮೂರ್ಖತನ ಎಂದು ಜಾನ್ ಅಬ್ರಹಾಂ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss