ಇಂದು ಬ್ರಿಟನ್‌ ಗೆ ಹೊಸ ಪ್ರಧಾನಿ: ಟ್ರಸ್‌ ಮತ್ತು ಸುನಕ್‌ ನಡುವೆ ಪೈಪೋಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕವಾಗಿ ಬಹು ನಿರೀಕ್ಷಿತ ಬ್ರಿಟನ್‌ ಹೊಸ ಪ್ರಧಾನಿ ಆಯ್ಕೆಗೆ ಇಂದು ತೆರೆಬೀಳುವ ಸಾಧ್ಯತೆಯಿದೆ. ಬೋರೀಸ್‌ ಜಾನ್ಸನ್‌ ಪ್ರಧಾನಿ ಸ್ಥಾನದಿಂದ ಕೆಳಗಿಳಿದ ನಂತರ ಅವರ ಸ್ಥಾನಕ್ಕೆ ಇಂದು ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಮಾಜಿ ಚಾನ್ಸೆಲರ್ ರಿಷಿ ಸುನಕ್ ನಡುವೆ ಪ್ರಧಾನಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದು ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ಮತದಾನವು ಶುಕ್ರವಾರ ಮುಕ್ತಾಯಗೊಂಡಿದ್ದು ಇಂದು ಮಧ್ಯಾಹ್ನ 12.30ಕ್ಕೆ ಅದರ ಫಲಿತಾಂಶ ಹೊರಬೀಳಲಿದೆ.

ವಿಜೇತರಾದವರು ಮಂಗಳವಾರ ಸ್ಕಾಟ್ಲೆಂಡ್‌ ಗೆ ಪ್ರಯಾಣಿಸಿ ರಾಣಿ ಎಲಿಜಬೇತ್‌ ಅವರನ್ನು ಭೇಟಿ ಮಾಡಲಿದ್ದು ಸರ್ಕಾರ ರಚನೆಗೆ ಅವಕಾಶ ಕೇಳಲಿದ್ದಾರೆ. ಇಬ್ಬರು ಅಭ್ಯರ್ಥಿಗಳ ನಡುವೆ ಪೈಪೋಟಿ ಹೆಚ್ಚಿದ್ದು ಫಲಿತಾಂಶ ಪ್ರಕಟವಅದ ಬಳಿಕವೇ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದು ಹೊರಬೀಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!