ಇಲಿ ಹಿಡಿಯಲು ನೌಕರನ ನೇಮಕಾತಿ: ಈತನ ಸಂಬಳ ಲಕ್ಷಗಳಲ್ಲಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕಾದಲ್ಲಿ ಇಲಿಗಳನ್ನು ಹಿಡಿಯಲು ವಿಶೇಷ ಉದ್ಯೋಗ ನಿಯೋಜನೆಗಳನ್ನು ಕೈಗೊಳ್ಳಲಾಯಿತು. ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಇಲಿಗಳನ್ನು ಹಿಡಿಯಲು ಹೊಸ ಪೋಸ್ಟ್ ಅನ್ನು ರಚಿಸಿದ್ದಾರೆ. ಆ ನೌಕರನ ವಾರ್ಷಿಕ ವೇತನ 38 ಲಕ್ಷ 55 ಸಾವಿರ ರೂ. ಇದನ್ನು ಎರಿಕ್ ಆಡಮ್ಸ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಇಲಿಗಳ ವಿರುದ್ಧ ಹೋರಾಡಲು ನಿಮಗೆ ಶಕ್ತಿ ಇದೆಯೇ? ಹಾಗಾದರೆ ನಿಮ್ಮ ಕೆಲಸ ಸಿದ್ಧವಾಗಿದೆ ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಕುರಿತು ಮೇಯರ್ ಕಚೇರಿಯೂ ಪ್ರಕಟಣೆ ಹೊರಡಿಸಿದೆ.

ಉದ್ಯೋಗಿಗೆ ವರ್ಷಕ್ಕೆ 170 ಸಾವಿರ ಡಾಲರ್ (38 ಲಕ್ಷ 55 ಸಾವಿರ ರೂ.) ವೇತನ ಇರಲಿದೆ ಎಂಬುದು ಬಹಿರಂಗವಾಗಿದೆ. ಆದರೆ ಅಭ್ಯರ್ಥಿಯು ನಾಯಕತ್ವ ಮತ್ತು ಇಲಿಗಳನ್ನು ಹಿಡಿಯುವ ಸಾಮರ್ಥ್ಯದಂತಹ ಗುಣಗಳನ್ನು ಹೊಂದಿರಬೇಕು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!