May 2, 2026
Saturday, May 2, 2026
spot_img

ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ನಿವಾಸದ ಮೇಲೆ ದಾಳಿ: ಪ್ರತಿಭಟನಾಕಾರರು ಅರೆಸ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿಯವರ ಮನೆಯ ಮೇಲೆ ಬಾಂಬ್ ದಾಳಿ ನಡೆದಿದೆ.

ನ್ಯೂಯಾರ್ಕ್ ನಿವಾಸ ಗ್ರೇಸಿ ಮ್ಯಾನ್ಷನ್ ಹೊರಗೆ ಪ್ರತಿಭಟನೆ ನಡೆದಿದ್ದು ಈ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ನ್ಯೂಯಾರ್ಕ್ ಪೊಲೀಸ್ ಆಯುಕ್ತ ಜೆಸ್ಸಿಕಾ ಎಸ್. ಟಿಶ್ ಅವರ ಪ್ರಕಾರ, ಪ್ರತಿಭಟನೆಯ ಸಮಯದಲ್ಲಿ ಅನುಮಾನಾಸ್ಪದ ಸಾಧನವನ್ನು ಎಸೆಯಲಾಯಿತು. ಘಟನೆಯ ಸಮಯದಲ್ಲಿ ಮೇಯರ್ ಮಮ್ದಾನಿ ಮತ್ತು ಅವರ ಪತ್ನಿ ರಾಮ ದುವಾಜಿ ಮನೆಯೊಳಗೆ ಇದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಘಟನೆ ನಂತರ ಆರು ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಸಾರ್ವಜನಿಕ ಮುಸ್ಲಿಂ ಪ್ರಾರ್ಥನೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮತ್ತು ನಗರದಲ್ಲಿ ಹೆಚ್ಚುತ್ತಿರುವ ಆಪಾದಿತ ಇಸ್ಲಾಮೀಕರಣವನ್ನ ವಿರೋಧಿಸಿ, ಮುಸ್ಲಿಂ ಜನಾಂಗದ ಮೇಯರ್ ಜೋಹ್ರಾನ್ ಮಮ್ದಾನಿ ನಿವಾಸವಾದ ಗ್ರೇಸಿ ಮ್ಯಾನ್ಷನ್ ಹೊರಗೆ ತೀವ್ರ ಬಲಪಂಥೀಯ ಪ್ರಭಾವಿ ಜೇಕ್ ಲ್ಯಾಂಗ್ ಪ್ರತಿಭಟನೆ ನಡೆಸುತ್ತಿದ್ದರು. ಇಸ್ಲಾಂ ವಿರೋಧಿ ಪ್ರತಿಭಟನೆಯಲ್ಲಿ 20 ಮಂದಿ ಸೇರಿದರೆ,ಇದನ್ನು ವಿರೋಧಿಸಲು ಸುಮಾರು 125 ಮಂದಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ.

ಈ ವೇಳೆ ಪ್ರತಿಭಟನಾಕಾರರ ದೊಡ್ಡ ಗುಂಪಿನ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಮಾಮ್ದಾನಿ ನಿವಾಸದ ಕಡೆಗೆ ಅನುಮಾಸ್ಪದ ವಸ್ತುಗಳನ್ನು ಎಸೆಯಲು ಪ್ರಯತ್ನಿಸಿದ್ದಾರೆ .

ತಕ್ಷಣವೇ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದು, ಇದು ಕಪ್ಪು ಟೇಪ್‌ನಲ್ಲಿ ಸುತ್ತಿದ ಜಾಡಿಗಳು ಮತ್ತು ನಟ್‌ಗಳು, ಬೋಲ್ಟ್‌ಗಳು, ಸ್ಕ್ರೂಗಳು ಮತ್ತು ಬೆಳಗಿಸಬಹುದಾದ ಹವ್ಯಾಸ ಫ್ಯೂಸ್‌ನಿಂದ ತುಂಬಿದ್ದು, ವಸ್ತುಗಳು ಕ್ರಿಯಾತ್ಮಕ ಸುಧಾರಿತ ಸ್ಫೋಟಕ ಸಾಧನಗಳೇ ಅಥವಾ ವಂಚನೆಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಈ ಸಾಧನ ಸಾಕಷ್ಟು ಅನುಮಾನಾಸ್ಪದವಾಗಿದ್ದು, ಇದನ್ನು ಹೆಚ್ಚಿನ ಪರಿಶೀಲನೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !