ಜೈಷೆ ಸಂಘಟನೆಯ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರೀಯ ತನಿಖಾ ದಳ(NIA) ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ (JeM) ಉಗ್ರ ಸಂಘಟನೆಯ (Terror Group) ಶಂಕಿತ ಉಗ್ರನೊಬ್ಬನನ್ನು ಭಾನುವಾರ ಬಂಧಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಉಗ್ರ ಕೃತ್ಯಗಳ ಸಂಚು ರೂಪಿಸಿದ ಆರೋಪ ಈತನ ಮೇಲಿದ್ದು, ಮೊಹಮ್ಮದ್ ಉಬೈದ್ ಮಲಿಕ್ ಬಂಧಿತನ ಹೆಸರು. ಈತ ಕುಪ್ವಾರಾ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಬಂಧಿತ ಮಲಿಕ್, ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಚಲನವಲನಗಳ ಮೇಲೆ ನಿಗಾ ಇಟ್ಟು, ಆ ಮಾಹಿತಿಯನ್ನು ಉಗ್ರ ಸಂಘಟನೆಗೆ ರವಾನಿಸುತ್ತಿದ್ದನು. ಕಾಶ್ಮೀರ ಕಣಿವೆ ಉಗ್ರ ಚಟುವಟಿಕೆಗಳಲ್ಲಿ ಮಲಿಕ್ ಭಾಗಿಯಾಗಿದ್ದಾನೆಂಬುದನ್ನು ಸಾಬೀತು ಪಡಿಸುವ ಅನೇಕ ಕಾಗದ ಪತ್ರಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ.

ಪಾಕಿಸ್ತಾನದಲ್ಲಿ ನೆಲೆಸಿರುವ ಉಗ್ರ ಕಮಾಂಡರ್‌ಗಳ ಜೊತೆಗೂಡಿ ವಿವಿಧ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರು ಮತ್ತು ಹಾಗೂ ಇಲ್ಲಿನವರ ಮೇಲೆ ನಡೆಸಿದ ಪಿತೂರಿಗಳಿಗೆ ಸಂಬಂಧಿಸಿದಂತೆ ಎನ್‌ಐಎ ಕಳೆದ ವರ್ಷ ಜೂನ್ 21ರಂದು ಪ್ರಕರಣವನ್ನು ದಾಖಲಿಸಿತ್ತು.

ಎನ್‌ಐಎ ಪ್ರಕಾರ, ಸುಧಾರಿತ ಸ್ಫೋಟಕಗಳು ಮತ್ತು ಸ್ಫೋಟಕಗಳನ್ನು ಡ್ರೋನ್‌ಗಳ ಮೂಲಕ ರವಾನಿಸಲಾಗುತ್ತಿತ್ತು. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ದಾಳಿಗಳನ್ನು ಕಾರ್ಯಗತಗೊಳಿಸಲು ಸ್ಥಳೀಯವಾಗಿ ಬೆಂಬಲ ದೊರೆಯುತ್ತಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿನ ಅಲ್ಪಸಂಖ್ಯಾತರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿಯನ್ನು ಮುಖ್ಯವಾಗಿ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಎನ್‌ಐಎ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!