Friday, September 30, 2022

Latest Posts

ಸಣ್ಣ ರೈತರೇ ಭಾರತದ ಹೈನುಗಾರಿಕೆ ಕ್ಷೇತ್ರದ ಶಕ್ತಿ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸಣ್ಣ ರೈತರೇ ಭಾರತದ ಡೈರಿ ಕ್ಷೇತ್ರದ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸೋಮವಾರ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್‌ನಲ್ಲಿ ಆಯೋಜಿಸಲಾದ ಇಂಟರ್ನ್ಯಾಷನಲ್ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯುಡಿಎಸ್) 2022 ರ ಉದ್ಘಾಟಿನಾ ಸಮಾರಂಭದಲ್ಲಿ ಈ ಮಾತನ್ನು ಹೇಳಿದರು.

ಈ ಶೃಂಗಸಭೆಯು ಜನರು ಪರಸ್ಪರ ಕಲಿಯಲು ಮತ್ತು ಡೈರಿ ಕ್ಷೇತ್ರದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡಲಿದೆ. ʻಪಶು ಧಾನ್ʼ ಪರಿಕಲ್ಪನೆಯು ನಮ್ಮ ಭಾರತೀಯ ಸಂಪ್ರದಾಯದ ಭಾಗವಾಗಿದ್ದು, ಭಾರತದಲ್ಲಿ ಡೈರಿ ಕ್ಷೇತ್ರದ ಬಲ ಸಣ್ಣ ರೈತರು ಮತ್ತು ಜನಸಾಮಾನ್ಯರ ಉತ್ಪಾದನೆಯು ಪ್ರಮುಖ ಭಾಗವಾಗಿದೆ ಎಂದರು.

ಹೈನುಗಾರಿಕೆ ಕ್ಷೇತ್ರ ಗ್ರಾಮೀಣ ಆರ್ಥಿಕತೆ ಬೆಳವಣಿಗೆಗೆ ಪ್ರಚೋದನೆಯನ್ನು ನೀಡುವುದಲ್ಲದೆ, ಇದು ಪ್ರಪಂಚದಾದ್ಯಂತದ ಕೋಟಿಗಟ್ಟಲೆ ಜನರಿಗೆ ಜೀವನಾಧಾರದ ಪ್ರಮುಖ ಮೂಲ ಕೂಡಾ ಹೌದು. ಭಾರತದ ಡೈರಿ ಕ್ಷೇತ್ರ ಹೆಚ್ಚಾಗಿ ಜನಸಾಮಾನ್ಯರ ಉತ್ಪಾದನೆಯಿಂದಲೇ ಗುರುತಿಸಲ್ಪಟ್ಟಿದೆ. ಇಂದು 8 ಕೋಟಿ ಕುಟುಂಬಗಳು ಡೈರಿ ಕ್ಷೇತ್ರದಿಂದ ಉದ್ಯೋಗ ಪಡೆಯುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು.

ರೈತರ ಸಾಮೂಹಿಕ ಪ್ರಯತ್ನದಿಂದಾಗಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಡೈರಿ ಉತ್ಪನ್ನಗಳ ಉತ್ಪಾದಕ ರಾಷ್ಟ್ರ ಎಂದೆನಿಸಿದೆ. ಪ್ರಪಂಚದ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಡೈರಿ ಕ್ಷೇತ್ರದ ಪ್ರೇರಕ ಶಕ್ತಿ ಸಣ್ಣ ರೈತರೇ ಆಗಿದ್ದಾರೆ ಎಂಬುದನ್ನು ನೆನೆಪಿಸಿಕೊಂಡರು. ಇದೇ ವೇಳೆ ಭಾರತದಲ್ಲಿ ಡಿಜಿಟಲ್ ಕ್ರಾಂತಿಯು ಡೈರಿ ಕ್ಷೇತ್ರವನ್ನು ಹೇಗೆ ತಲುಪಿದೆ ಎಂಬುದರ ಕುರಿತು ಮಾತನಾಡಿದ ಪ್ರಧಾನಿ, ಡಿಜಿಟಲ್ ಪಾವತಿ ವ್ಯವಸ್ಥೆಯು ಪ್ರಪಂಚದಾದ್ಯಂತದ ರೈತರಿಗೆ ಸಹಾಯ ಮಾಡುತ್ತದೆ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!