ಸಂತ ರವಿದಾಸರ ಜಯಂತಿ: ʻಜಗನ್ನಾಥ ಭವನʼದಲ್ಲಿ ಗೌರವ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ “ಸಂತ ರವಿದಾಸರ 573ನೇ ಜಯಂತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಂದು ಸಂತ ರವಿದಾಸರ 573ನೇ ಜಯಂತಿ ಆಚರಿಸಲಾಗಿದೆ. ಸಂತ ರವಿದಾಸರು ಮಹಾನ್ ಕವಿ, ಮಹಾನ್ ಚೇತನ ಮಾತ್ರವಲ್ಲದೆ ಸಂತರೂ ಆಗಿ ಮಾರ್ಗದರ್ಶನ ನೀಡಿದವರು. ಇಡೀ ಉತ್ತರ ಭಾರತದಲ್ಲಿ ದಲಿತ ವರ್ಗ, ಹಿಂದುಳಿದ ವರ್ಗ ಮತ್ತು ಸಣ್ಣ ಸಮುದಾಯಗಳ ಮೇಲೆ ಅವರ ಛಾಯೆ ಇತ್ತು ಎಂದು ವಿವರಿಸಿದರು.

ಇಂದಿಗೂ ಅನೇಕ ಮಠಮಾನ್ಯಗಳು ಅವರನ್ನು ದೈವದಂತೆ ನೋಡುತ್ತಿದ್ದಾರೆ. ಲಕ್ಷಾಂತರ ಮಂದಿ ಅವರ ಗುಣಗಾನ ಮಾಡುವುದಲ್ಲದೆ, ಅವರ ಪರಿಶ್ರಮವನ್ನು ಇವತ್ತು ನೆನಪು ಮಾಡುತ್ತಾರೆ. ಬಿಜೆಪಿ ಎಸ್‍ಸಿ ಮೋರ್ಚಾವು ಇಂಥ ಉತ್ತಮ ನಡೆ, ಸಮಾಜಕ್ಕೆ ಕೊಟ್ಟ ಕೊಡುಗೆಯ ಪರಿಚಯಕ್ಕಾಗಿ ಅವರ ಜಯಂತಿಯನ್ನು ಆಚರಿಸುತ್ತಿದೆ ಎಂದು ತಿಳಿಸಿದರು. ಕರ್ನಾಟಕದ 312 ಮಂಡಲಗಳಲ್ಲೂ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮತ್ತು ಮುಖಂಡರು, ಕಾರ್ಯಕರ್ತರು, ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!