Friday, September 30, 2022

Latest Posts

NIA RAID | ಬೆಂಗಳೂರಿಗೂ ಶಾಕ್ ನೀಡಿದ ಟೀಮ್: ಅಪಾರ್ಟ್‌ಮೆಂಟ್‌ನಲ್ಲಿ ಶೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕರಾವಳಿ ಸಹಿತ ದೇಶದ ಹಲವೆಡೆಗಳಲ್ಲಿ ಮುಂದುವರಿಯುತ್ತಿರುವ ಎನ್‌ಐಎ ದಾಳಿ ವ್ಯಾಪಕ ಸಂಚಲನ ಮೂಡಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮಾಹಿತಿ ಕಲೆ ಹಾಕುತ್ತಿರುವ ತಂಡ ಇದುವರೆಗೆ ನಾಲ್ಕು ಕಡೆಗಳಿಗೆ ದಾಳಿ ನಡೆಸಿದೆ. ರಿಚ್ ಮಂಡ್‌ಟೌನ್ ಅಪಾರ್ಟ್‌ಮೆಂಟ್‌ವೊಂದರ ಮೇಲೆ ಕೂಡಾ ದಾಳಿ ನಡೆಸಿ ಶೋಧ ಕಾರ್ಯ ನಡೆಯುತ್ತಿದ್ದು, ಲಭ್ಯವಾಗುವ ಮಾಹಿತಿಗಳ ಹಿನ್ನೆಲೆಯಲ್ಲಿ ಮತ್ತಷ್ಟು ಕಡೆಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಅಂದಾಜಿಸಲಾಗಿದೆ.
ಗುರುವಾರ ಬೆಳ್ಳಂಬೆಳಗ್ಗೆ ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್‌ಐಎ, ಇಡಿ, ಸ್ಥಳೀಯ ಪೊಲೀಸರು ದಾಳಿ ಹಮ್ಮಿಕೊಂಡಿದ್ದು, ಇದುವರೆಗೆ ಪಿಫ್‌ಐ ಸಂಘಟನೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!