‘ಭಯೋತ್ಪಾದಕ ತರಬೇತಿ’: ಮಾಹಿತಿ ಮೇರೆಗೆ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಎನ್‌ಐಎ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕರಾಟೆ ಪಾಠ ನಡೆಸುವ ನೆಪದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ “ಭಯೋತ್ಪಾದಕ ತರಬೇತಿ” ನಡೆಸುತ್ತಿರುವುದಾಗಿ ಮಾಹಿತಿ ತಿಳಿದ ರಾಷ್ಟ್ರೀಯ ತನಿಖಾ ಸಂಸ್ಥೆ ಭಾನುವಾರ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದೆ. ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರು, ಕಡಪ ಮತ್ತು ತೆಲಂಗಾಣದ ನಿಜಾಮಾಬಾದ್ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಿಎಫ್‌ಐ ಜಿಲ್ಲಾ ಸಂಚಾಲಕ ಶಾದುಲ್ಲಾ ಅವರ ನಿವಾಸವನ್ನು ಸಂಸ್ಥೆ ಶೋಧಿಸುತ್ತಿದೆ.

ನಿಜಾಮಾಬಾದ್‌ನಲ್ಲಿ ಎನ್‌ಐಎಯ ಕನಿಷ್ಠ 23 ತಂಡಗಳು ದಾಳಿ ನಡೆಸಿದರೆ, ಗುಂಟೂರು ಜಿಲ್ಲೆಯಲ್ಲಿ 2 ತಂಡಗಳು ಶೋಧ ಕಾರ್ಯಕ್ಕಿಳಿದಿದ್ದಾರೆ. ಪೊಲೀಸರು ಈಗಾಗಲೇ ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್‌ರನ್ನು ಬಂಧಿಸಿದ್ದು, ಅವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್‌ಐ) ಚಟುವಟಿಕೆಗಳ ಬಗ್ಗೆ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ನಿರ್ಮಲ್ ಜಿಲ್ಲೆಯ ಭೈಂಸಾದಲ್ಲಿಯೂ ಶೋಧ ನಡೆಯುತ್ತಿದೆ. ಮದೀನಾ ಕಾಲೋನಿಯಲ್ಲಿನ ಕೆಲವು ಮನೆಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಜಗಿತ್ಯದ ಮೂರು ಮನೆ, ಟವರ್ ಸರ್ಕಲ್ ನ ಕೇರ್ ಮೆಡಿಕಲ್ ಹಾಗೂ ಟಿ.ಆರ್.ನಗರದ ಒಂದು ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ.  ಈಗಾಗಲೇ ಹಲವು ಡೈರಿ ಹಾಗೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೆಲ್ಲೂರು ಜಿಲ್ಲೆಯ ಬುಚ್ಚಿರೆಡ್ಡಿಪಾಲೆಂ ಖಾಜಾನಗರದಲ್ಲಿರುವ ಇಲಿಯಾಜ್ ಮತ್ತು ಆತನ ಸ್ನೇಹಿತರ ಮನೆಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ತೆಲುಗು ರಾಜ್ಯಗಳಲ್ಲಿ ಕೋಮುಗಲಭೆ ಸೃಷ್ಟಿಸಲು ಕೆಲವರು ತರಬೇತಿ ನೀಡುತ್ತಿರುವುದನ್ನು ಎನ್‌ಐಎ ಪತ್ತೆ ಹಚ್ಚಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!