Friday, June 2, 2023

Latest Posts

CINEMA| ಯಂಗ್‌ ಹೀರೋನನ್ನು ಎರಡನೇ ಮದುವೆಯಾಗಲಿದ್ದಾರಾ ನಿಹಾರಿಕಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಗಾ ಡಾಟರ್ ನೀಹಾರಿಕಾಳ ವಿಶೇಷ ಪರಿಚಯ ಅಗತ್ಯವಿಲ್ಲ. ಇದುವರೆಗೂ ಮೆಗಾ ಫ್ಯಾಮಿಲಿಯಿಂದ ಯಾವ ಹುಡುಗಿಯರೂ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿಲ್ಲ. ಆದರೆ ನಿಹಾರಿಕಾ ಆ್ಯಂಕರ್ ಆಗಿ ನಂತರ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಜೊನ್ನಲಗಡ್ಡ ಚೈತನ್ಯ ಅವರನ್ನು ಮದುವೆಯಾದ ನಂತರ ನಿಹಾರಿಕಾ ಸಿನಿಮಾಗಳಿಗೆ ಗುಡ್ ಬೈ ಹೇಳಿ ವೆಬ್ ಸಿರೀಸ್ ನಿರ್ಮಿಸಿ ನಿರ್ಮಾಪಕಿಯಾದರು. ಇತ್ತೀಚೆಗೆ, ನಿಹಾರಿಕಾ ಹೈದರಾಬಾದ್‌ನಲ್ಲಿ ಪಿಂಕ್ ಪ್ರೊಡಕ್ಷನ್ ಹೌಸ್ ಅನ್ನು ಸಹ ಪ್ರಾರಂಭಿಸಿದರು.

ಏತನ್ಮಧ್ಯೆ, ಇತ್ತೀಚೆಗೆ ನಿಹಾರಿಕಾ ಮತ್ತು ಚೈತನ್ಯ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳನ್ನು ಅಳಿಸಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ. ಇವರಿಬ್ಬರಿಗೂ ವಿಚ್ಚೇದನ ಕೂಡ ಆಗಿದೆ.ಇದೀಗ ನಿಹಾರಿಕಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ನೆಟ್ ನಲ್ಲಿ ವೈರಲ್ ಆಗಿದೆ.

ನಿಹಾರಿಕಾ ಯುವ ನಾಯಕ ಸಾಯಿಧರಮ್ ತೇಜ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ನೆಟ್‌ನಲ್ಲಿ ವೈರಲ್ ಆಗಿದೆ. ಸಾಯಿ ಧರಂ ತೇಜ್ ನಿಹಾರಿಕಾ ಅವರ ಸೋದರ ಮಾವ ಎಲ್ಲಾ ಸರಿ ಹೋಗಿದ್ದರೆ ನಿಹಾರಿಕಾ ಮತ್ತು ಸಾಯಿ ಧರಂತೇಜ್ ಮದುವೆಯ ಮೂಲಕ ಒಂದಾಗುತ್ತಿದ್ದರು. ಆದರೆ ಸಾಯಿ ಧರಂತೇಜ್ ಬಾಲ್ಯದಿಂದಲೂ ನಿಹಾರಿಕಾಳನ್ನು ನೋಡುತ್ತಾ ಬೆಳೆದರು ಮತ್ತು ನಿಹಾರಿಕಾ ಬಗ್ಗೆ ಅಂತಹ ಭಾವನೆ ಇರಲಿಲ್ಲ ಎಂಬ ಟಾಕ್‌ ಇದೆ.

ಈಗ ನಾಗಬಾಬು ಸಾಯಿಧರಮ್ ತೇಜ್ ಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದು, ಹಾಗೆ ಮಾಡಿದರೆ ಮಗಳು ಕಣ್ಣ ಮುಂದೆ ಇರುತ್ತಾಳೆ ಎಂಬ ಉದ್ದೇಶ ಅವರದ್ದು ಎಂಬ ಸುದ್ದಿ ಹರಿದಾಡುತ್ತಿದೆ. ಮೆಗಾ ಫ್ಯಾಮಿಲಿಗೆ ಅಪಕೀರ್ತಿ ತರಲೆಂದೇ ಈ ರೀತಿ ವದಂತಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅದೇನೂ ಇಲ್ಲ ಎಂದು ನೆಟ್ ನಲ್ಲಿ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಮತ್ತು ಇದರಲ್ಲಿರುವ ಅಸಲಿ ಸತ್ಯ ಏನೆಂದು ಮೆಗಾ ಕುಟುಂಬ ಬಹಿರಂಗ ಮಾಡಿದ್ರೆ ಮಾತ್ರ ಗೊತ್ತಾಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!