ಪ್ರತಿ ಮತದಾರರ ಮನೆ, ಮನೆ ಸಂಪರ್ಕ ಬೆಳೆಸಿ ಮತದಾನದ ಜಾಗೃತಿ ಮೂಡಿಸಿ: ಕಾರ್ಯಕರ್ತರಿಗೆ ನಿರ್ಮಲ ಕುಮಾರ ಸುರಾನಾ ಕರೆ

ಹೊಸದಿಗಂತ ವರದಿ, ಚಿಕ್ಕೋಡಿ:

ಕಾರ್ಯಕರ್ತರು ಪ್ರತಿ ಮತದಾರರ ಮನೆ, ಮನೆ ಸಂಪರ್ಕ ಬೆಳೆಸಿ ಮತ್ತು ಚುನಾವಣೆಯಲ್ಲಿ ಮತದಾನ ಮಾಡುವ ವಿಧಾನದ ಮಾಹಿತಿ ನೀಡುವದರೊಂದಿಗೆ ಜಾಗೃತಿ ಮೂಡಿಸಿ. ಮತದಾರರ ಮನೆಗಳಿಗೆ ಹೋದಾಗ ಮೋಬೈಲ್ ನಂಬರ ಸಂಗ್ರಹಿಸಬೇಕು ಮತ್ತು ಮೊಬೈಲ ಮೂಲಕ ಮತದಾನದ ದಿನಾಂಕದವರೆಗೂ ಸಂಪರ್ಕದಲ್ಲಿರಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನಾ ಹೇಳಿದರು.

ಚಿಕ್ಕೋಡಿ ಪಟ್ಟಣದ ಜಯಪ್ರಜಾಶ ಭವನದಲ್ಲಿ ಆಯೋಜಿಸಿದ್ದ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ ಮಾತನಾಡಿ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪ್ರಭಾವಿ ಹಿರಿಯ ಮುಖಂಡರ ನೇತೃತ್ವದಲ್ಲಿ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ಮಾಡಬೇಕು.ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರದಷ್ಟು‌ ಹಾಗೂ 4 ಸಾವಿರದಷ್ಟು ಶಿಕ್ಷಕ ಮತದಾರರಿದ್ದು, ಈ ಮತದಾರರಿಗೆ ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ‌ ಅನುಷ್ಠಾನಗೊಂಡ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಕ್ರಮಗಳ ಮಾಹಿತಿ ನೀಡಬೇಕು ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಮತದಾರರ ಪಟ್ಟಿ ಕೈಯ್ಯಲ್ಲಿ ಹಿಡಿದುಕೊಂಡು ಸಂಪರ್ಕಿಸಬೇಕು ಎಂದರು.

ಕುಡಚಿ ಶಾಸಕ ಪಿ.ರಾಜು ಮಾತನಾಡಿ, ಪಕ್ಷದ ಪದಾಧಿಕಾರಿಗಳು, ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಹೀಗಾಗಿ ವಾಯವ್ಯ ಮತಕ್ಷೇತ್ರದ ಪದವಿ ಧರ ಹಾಗೂ ಶಿಕ್ಷಕ ಕ್ಷೇತ್ರದಿಂದ ಸ್ಪರ್ಧಿಸಿದ ಇಬ್ಬರೂ ಅಭ್ಯರ್ಥಿಳ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ ಮಾತನಾಡಿದರು. ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ್, ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ, ನಿಗಮ ಮಂಡಳಿ ಸದಸ್ಯರಾದ ಶಿವಾನಂದ ಪಾಟೀಲ, ಮಹೇಶ ಭಾತೆ , ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ‌ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ ಸ್ವಾಗತಿಸಿದರು, ನಿಂಗಪ್ಪ ಖೋಕಲೆ ಕಾರ್ಯಕ್ರಮ ನಿರೂಪಿಸಿದರು,‌ ಚಿಕ್ಕೋಡಿ-ಸದಲಗಾ ಮಂಡಲ ಅಧ್ಯಕ್ಷ ಸಂಜಯ ಪಾಟೀಲ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!