ಬಿಜೆಪಿ ಆಡಳಿತ ಸಹಿಸದೆ ರಾಜಕೀಯ ಷಡ್ಯಂತ್ರದಿoದ ಗೊಂದಲ ಸೃಷ್ಟಿ: ಸಿಟಿ ರವಿ ಕಿಡಿ

ಹೊಸದಿಗಂತ ವರದಿ, ಮಂಡ್ಯ :

ಭಾರತೀಯ ಜನತಾ ಪಕ್ಷ ರಾಷ್ಟ್ರದಲ್ಲಿ ಆಡಳಿತ ನಡೆಸುವುದನ್ನು ಸಹಿಸದ ಕೆಲವರು ರಾಜಕೀಯ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯದರ್ಶಿ ಸಿ.ಟಿ.ರವಿ ಗಂಭೀರವಾಗಿ ಆರೋಪಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಡಳಿತದ ಅಸಹಿಷ್ಣತೆಯಿಂದಾಗಿ ಬೇರೆ ಬೇರೆ ವಿಚಾರಗಳನ್ನೆತ್ತಿಕೊಂಡು ಇಲ್ಲದ ಗೂಂದಲ ಸೃಷ್ಠಿಸಲು ವಿಪಕ್ಷಗಳು ಮುಂದಾಗಿದ್ದಾರೆ ಕಿಡಿಕಾರಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಮೊದಲು ನಾರಾಯಣಗುರು ಪಠ್ಯವನ್ನು ತೆಗೆಯಲಾಗಿದೆ ಎಂದರು, ಇಲ್ಲವೆಂದ ಮೇಲೆ ಭಗತ್‌ಸಿಂಗ್ ವಿಚಾರ ಪಠ್ಯದಲ್ಲಿ ಸೇರಿಸಿಲ್ಲ. ನಂತರ ಕುವೆಂಪುರವರ ಪಠ್ಯವನ್ನು ತೆಗೆಯಲಾಗಿದೆ ಎಂದು ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಜೊತೆಗೆ ಆದಿಚುಂಚನಗಿರಿ ಪೀಠಾಧ್ಯಕ್ಷರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಇದನ್ನರಿತ ನಮ್ಮ ಶಿಕ್ಷಣ ಸಚಿವರು ಶ್ರೀಗಳನ್ನು ಭೇಟಿ ಮಾಡಿ ಬರಗೂರು ರಾಮಚಂದ್ರಪ್ಪವರು ಇದ್ದಾಗ ೭ ಕುವೆಂಪು ಪಠ್ಯಗಳನ್ನು ಅಳವಡಿಸಲಾಗಿತ್ತು. ಈಗ ೧೦ ವಿಷಯಗಳನ್ನು ಪಠ್ಯದಲ್ಲಿ ಜೋಡಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಶ್ರೀಗಳು ಅದಕ್ಕೆ ಸಹಮತ ವ್ಯಕ್ತಪಡಿಸಿದರು. ಇದೀಗ ಬಸವಣ್ಣನವರ ವಿಚಾರ ಎತ್ತಿದ್ದಾರೆ. ದೇಶ ಕಂಡ ಅಪ್ರತಿಮ ಸಮಾಜ ಸುಧಾರಕ ಬಸವಣ್ಣ. ಅವರ ವಿಚಾರಧಾರೆಗಳು ರಾಜ್ಯ, ರಾಷ್ಟç ಹಾಗೂ ವಿಶ್ವಮಟ್ಟದಲ್ಲಿ ದಾರ್ಶನಿಕರಾಗಿ ಹೊರಹೊಮ್ಮಿದ್ದಾರೆ. ಪಧಾನಿ ಮೋದಿಯವರು ಹತ್ತಾರು ಬಾರಿ ಬಸವಣ್ಣನವರ ವಿಚಾರಧಾರೆಗಳನ್ನು ಕೊಂಡಾಡಿದ್ದಾರೆ. ಹೀಗಿರುವಾಗ ಬಸವಣ್ಣನವರನ್ನು ಬಿಟ್ಟು ಪಠ್ಯ ಪರಿಷ್ಕರಣೆಯಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕುವೆಂಪು ಅವರ ಬಗ್ಗೆ ಯಾರೋ ಏನೋ ಬರೆದಿದ್ದನ್ನು ರೋಹಿತ್ ಚಕ್ರವತಿ ಶೇರ್ ಮಾಡಿದ್ದರು. ಈ ಬಗ್ಗೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲೇ ಪ್ರಕರಣ ದಾಖಲಿಸಿ, ತನಿಖೆಯನ್ನೂ ನಡೆಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಇಲ್ಲವೆಂಬ ಕಾರಣ ಅವರ ಮೇಲಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದ್ದಾರೆ. ಹೀಗಿರುವಾಗ ಮತ್ತೆ ಅದೇ ವಿಚಾರವನ್ನು ಇಟ್ಟುಕೊಂಡು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ದೇಶದ ಜನರ ಅಭಿಮಾನದ ಸಂಕೇತದAತೆ ಪಠ್ಯ ಪುಸ್ತಕ ರಚಿಸುತ್ತೇವೆ. ಒಂದು ವೇಳೆ ಪಠ್ಯ ಪರಿಷ್ಕರಣೆಯಲ್ಲಿ ಲೋಪವಾಗಿದ್ದರೆ ಸರಿಪಡಿಸುತ್ತೇವೆ. ಹಿಂದೆ ಆಗಿರುವ ತಪ್ಪುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ಗೊಂದಲ ಸೃಷ್ಠಿಸುವ ಸಲುವಾಗಿ ಇಂತಹ ಹಾದಿ ಹಿಡಿಯುತ್ತಿದ್ದಾರೆ. ಏನೇ ಆದರೂ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!