ಪಡಿತರದಲ್ಲಿ ಕೇಂದ್ರದ ಪಾಲು ಎಷ್ಟು? ಡಿಸಿಗೆ ಕ್ಲಾಸ್‌ ತೆಗೆದುಕೊಂಡ ವಿತ್ತ ಸಚಿವೆ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪಡಿತರದ ಬಗ್ಗೆ ಸರಿಯಾಗಿ ಮಾಹಿತಿ ತಿಳಿಯದ ಐಎಎಸ್‌ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಶುಕ್ರವಾರ (ಸೆಪ್ಟೆಂಬರ್ 2, 2022) ಕಾಮರೆಡ್ಡಿ ಜಿಲ್ಲೆಯ ಬನಸುವಾಡ ಕ್ಷೇತ್ರದ ಬಿಕನೂರಿನಲ್ಲಿರುವ ಪಡಿತರ ಅಂಗಡಿಗೆ ಸಚಿವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿತೇಶ್ ಪಟೇಲ್ ಅವರೂ ಸಚಿವರ ಜೊತೆಯಲ್ಲಿದ್ದರು. ಆಗ ವಿತ್ತ ಸಚಿವೆ ಜಿಲ್ಲಾಧಿಕಾರಿ ಕುರಿತು ಬಡವರಿಗೆ ನೀಡುವ ಪಡಿತರ ಅಕ್ಕಿಯಲ್ಲಿ ಕೇಂದ್ರದ ಪಾಲು ಎಷ್ಟು? ರಾಜ್ಯದ ಪಾಲು ಎಷ್ಟು? ಎಂದು ಪ್ರಶ್ನಿಸಿದ್ದಾರೆ. ಸಚಿವೆ ನಿರ್ಮಲಾ ಅವರು ಏಕಾಏಕಿ ಪ್ರಶ್ನೆ ಕೇಳಿದಕ್ಕೆ ತಬ್ಬಿಬ್ಬಾದ ಜಿಲ್ಲಾಧಿಕಾರಿ ಜಿತೇಶ್ ಉತ್ತರ ನೀಡದೆ ಸುಮ್ಮನೆ ನಿಂತು ಬಿಟ್ಟರು. ಜಿಲ್ಲಾಧಿಕಾರಿಯ ವರ್ತನೆಗೆ ಸಿಟ್ಟಿಗೆದ್ದ ಅವರು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಐಎಎಸ್ ಅಧಿಕಾರಿಯಾಗಿರುವ ನಿಮಗೆ ಇಷ್ಟು ಸಣ್ಣ ವಿಚಾರ ಗೊತ್ತಿಲ್ಲವೇ? ಇಂತಹ ವಿಷಯಗಳು ತಿಳಿಯದೆ ಜಿಲ್ಲಾಧಿಕಾರಿ ಹೇಗಾದಿರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರ್ಧ ಗಂಟೆಯಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಮಯ ನೀಡಿದರು.

ಇಷ್ಟಕ್ಕೇ ಸುಮ್ಮನಾಗದ ಸಚಿವರು ಪಡಿತರ ಅಂಗಡಿಯ ಫ್ಲೆಕ್ಸಿನಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. PMGKAY ಅಡಿಯಲ್ಲಿ ಉಚಿತವಾಗಿ ನೀಡುತ್ತಿರುವ 5 ಕೆಜಿ ಆಹಾರ ಧಾನ್ಯಗಳ ಸಂಪೂರ್ಣ ವೆಚ್ಚವನ್ನು ಮೋದಿ ಸರ್ಕಾರ ಭರಿಸುತ್ತಿದೆ. NFSA ಅಡಿಯಲ್ಲಿ ಆಹಾರ ಧಾನ್ಯಗಳ ವೆಚ್ಚದ 80% ಕ್ಕಿಂತ ಹೆಚ್ಚು ಮೋದಿ ಸರ್ಕಾರದಿಂದ ಭರಿಸಲ್ಪಡುತ್ತದೆ. ಹಾಗಿದ್ದರೂ ಪ್ರಧಾನಿ ಫೋಟೋ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು. ಪಡಿತರ ಅಂಗಡಿಗಳಲ್ಲಿ ಮೋದಿ ಫೋಟೋ ಹಾಕಬೇಕು ಇಲ್ಲದಿದ್ದರೆ ತಾವೇ ಬಂದು ಹಾಕುವುದಾಗಿ ಎಚ್ಚರಿಸಿದರು.

ಬಡವರ ಹೊಟ್ಟೆ ತುಂಬಿಸಲು ದೇಶದ ಪ್ರಧಾನಿ ಸಾರಿಗೆ ವೆಚ್ಚವನ್ನೂ ಭರಿಸಿ ಬಡವರಿಗೆ ಅನ್ನ ನೀಡುತ್ತಿದೆ ಆದರೂ ಪ್ರಧಾನಿ ಮೋದಿ ಅವರ ಫೋಟೋ ಹಾಕೋಕೆ ನಿಮಗೆ ಆಗಿಲ್ಲ. ನಿಮ್ಮಿಂದ ಆಗಲ್ಲ ಅಂತಾದರೆ ನಮ್ಮವರೇ ಪ್ರಧಾನಿ ಮೋದಿಯವರ ಫೋಟೋ ತಂದು ಹಾಕುತ್ತಾರೆ ಆ ಫೋಟೋವನ್ನು ಯಾರೂ ತೆಗೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಧಿಕಾರಿಯವರದ್ದು ಎಂದು ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!