ತನ್ವೀರ್ ವಿರುದ್ಧ ಎನ್’ಐಎ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರುತ್ತದೆ: ಸಚಿವ ಎಂ.ಬಿ. ಪಾಟೀಲ

ದಿಗಂತ ವರದಿ ವಿಜಯಪುರ:

ಉಗ್ರರ ಜೊತೆಗೆ ತನ್ವೀರ ಸಂಬಂಧ ಇದೀಯೋ ಗೊತ್ತಿಲ್ಲ. ಈ ಕುರಿತು ತನ್ವೀರ ವಿರುದ್ಧ ಎನ್’ಐಎ ತನಿಖೆ ಆಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎನ್‌ಐಎಗೆ ಕೊಡಲಿ. ಎನ್‌ಐಎ ತನಿಖೆಯಲ್ಲಿ ಈ ಬಗ್ಗೆ ಸತ್ಯಾಸತ್ಯತೆ ಹೊರಗಡೆ ಬರುತ್ತದೆ. ತನಿಖೆ ಎದುರಿಸಲು ತನ್ವೀರ ಅವರು ಸಿದ್ಧ ಎಂದಿದ್ದಾರೆ ಎಂದರು‌‌.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮತೆಗೆದುಕೊಳ್ಳಬಹುದು. ಆದರೆ, ತನಿಖೆಯಲ್ಲಿ ಸುಳ್ಳು ಅಂತಾದರೆ ಯತ್ನಾಳ ಏನು ಮಾಡ್ತಾರೆ ಎನ್ನುವುದು ನಮ್ಮ ಪ್ರಶ್ನೆ ? ಎಂದು ವಾಗ್ದಾಳಿ ನಡೆಸಿದರು.

ಇಸ್ಲಾಂ ಧರ್ಮವನ್ನು ಶಾಸಕ ಯತ್ನಾಳ ದ್ವೇಷಿಸಿಕೊಂಡೆ ಬಂದಿದ್ದಾರೆ. ಆದರೆ, ಜೆಡಿಎಸ್‌ನಲ್ಲಿದ್ದಾಗ ಮುಸ್ಲಿಂನವರನ್ನು ಓಲೈಸುವ ಕೆಲಸ ಮಾಡಿದ್ದಾರೆ. ಅಂದು ಮುಸ್ಲಿಂರ ಮತಗಳು ಬೇಕಿತ್ತು. ಆಮೇಲೆ ಬಿಜೆಪಿಗೆ ಬಂದ್ಮಲೆ ಹಿಂದುತ್ವ, ಹಿಂದೂ ಹುಲಿ ಎಂದು ಬಿರುದು ಇಟ್ಟುಕೊಂಡಿದ್ದಾರೆ. ಹಿಂದೂಗಳು, ಮುಸ್ಲಿಂರನ್ನು ನಾನು ಗೌರವಿಸುತ್ತೇನೆ ಎಂದರು.

ಹಿಂದೂಗಳು, ಮುಸ್ಲಿಂ ಸೇರಿದಂತೆ ಎಲ್ಲರಿಗೂ ನ್ಯಾಯ ಸಿಗಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂರ ದೊಡ್ಡ ಪಾತ್ರ ಇದೆ. ನಮಗೇನು ಹಕ್ಕಿದೆ, ಅದು ಅವರಿಗೂ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!