ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ 8ನೇ ವೇತನ ಆಯೋಗ ರಚನೆ ಪ್ರಸ್ತಾಪವಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ 8ನೇ ವೇತನ ಆಯೋಗ ರಚಿಸುವ ಪ್ರಸ್ತಾಪವನ್ನು ಪರಿಗಣಿಸಿಲ್ಲ ಎಂದು ಕೇಂದ್ರ ಈ ಕುರಿತಂತೆ ಸ್ಪಷ್ಟನೆ ನೀಡಿದೆ. 2026 ರ ಜನವರಿ 1ರಂದು ಜಾರಿಗೊಳಿಸಲು 8ನೇ ವೇತನ ಆಯೋಗವನ್ನು ಸಮಯಕ್ಕೆ ರಚಿಸುವ ಬಗ್ಗೆ ಖಾತ್ರಿ ಪಡಿಸಲು ಕೇಂದ್ರ ಪ್ರಸ್ತಾಪಿಸಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದರು.

7ನೇ ವೇತನ ಆಯೋಗದ ಶಿಫಾರಸುಗಳನ್ನು ಇಲ್ಲಿಯವರೆಗೆ ಜಾರಿಗೊಳಿಸದಿರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಚೌಧರಿ, ಈ ವಿಚಾರವನ್ನು ಕೇಂದ್ರ ಸಂಪುಟದಿಂದ ಪರಿಗಣಿಸಲಾಗಿಲ್ಲ, ಜತೆಗೆ 7ನೇ ವೇತನ ಆಯೋಗವನ್ನು ಭತ್ಯೆ ಆಧರಿತ ಮತ್ತು ವೇತನ ಪರಿಷ್ಕರಣೆಗಾಗಿ ಸಂಪುಟ ಅನುಮೋದನೆ ನೀಡಿಲ್ಲ ಎಂದರು.

ಇದೇ ವೇಳೆ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ವೇತನದ ನೈಜ ಮೌಲ್ಯದಲ್ಲಿನ ಕಡಿತವನ್ನು ಸರಿದೂಗಿಸಲು ತುಟ್ಟಿಭತ್ಯೆಗಳನ್ನು (ಡಿಎ) ಪಾವತಿಸಲಾಗುತ್ತದೆ. ಹಣದುಬ್ಬರದ ಕಾರಣದಿಂದಾಗಿ ಈ ಬಗ್ಗೆ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!