June 20, 2026
Saturday, June 20, 2026
spot_img

ರಶೀದಿ ಇಲ್ಲ, ಕಾಣಿಕೆಗಳ ಸುಳಿವಿಲ್ಲ: ರಾಮಲಲಾಗೆ ಅರ್ಪಿಸಿದ ಬೆಳ್ಳಿ ಕಾಣಿಕೆ ಎಲ್ಲಿ ಹೋದ್ವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ್ದ ಬೆಳ್ಳಿ ಕಾಣಿಕೆಗಳು ನಾಪತ್ತೆಯಾಗಿರುವ ಆರೋಪ ಹೊಸ ಚರ್ಚೆಗೆ ಕಾರಣವಾಗಿದೆ. ಮುಂಬೈನ ಉದ್ಯಮಿ ಅನಿಲ್ ವಿಶ್ವಕರ್ಮ ಅವರು ಕಳೆದ ವರ್ಷ ರಾಮಲಲ್ಲಾಗೆ ಸುಮಾರು 3 ಕೆ.ಜಿ ತೂಕದ ಬೆಳ್ಳಿಯ ಹಾರ ಹಾಗೂ ಚರಣ ಪಾದುಕೆಯನ್ನು ಸಮರ್ಪಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಅವರಿಗೆ ಅಧಿಕೃತ ರಶೀದಿ ಅಥವಾ ಯಾವುದೇ ದೃಢೀಕರಣ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.

ಭಕ್ತರ ಆರೋಪ ಏನು?

ಕಾಣಿಕೆ ಸಲ್ಲಿಸುವ ವೇಳೆ ದೇವಸ್ಥಾನದ ಸಿಬ್ಬಂದಿ ರಶೀದಿ ಹಾಗೂ ಫೋಟೋ ಕಳುಹಿಸುವ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಉದ್ಯಮಿ ಹಾಗೂ ಅವರ ಸಹಚರರು ಹೇಳಿದ್ದಾರೆ.

ಇನ್ನಷ್ಟು ಕಾಣಿಕೆಗಳಿಗೂ ಸುಳಿವಿಲ್ಲ

ಉತ್ತರ ಭಾರತದ ಜ್ಯುವೆಲ್ಲರ್ಸ್ ಸಂಘದ ಪದಾಧಿಕಾರಿಗಳು, ದೇವಸ್ಥಾನದ ನಿರ್ಮಾಣಕ್ಕಾಗಿ ಸಂಗ್ರಹಿಸಲಾಗಿದ್ದ ಸುಮಾರು 60 ಕೆ.ಜಿ ಬೆಳ್ಳಿ ಮತ್ತು ಇತರ ಬೆಳ್ಳಿ ವಸ್ತುಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:

ಎಸ್ಐಟಿ ತನಿಖೆ ಮುಂದುವರಿಕೆ

ಪ್ರಕರಣ ಬೆಳಕಿಗೆ ಬಂದ ಬಳಿಕ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಹಲವು ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಈಗಾಗಲೇ ಐವರು ಶಂಕಿತರನ್ನು ಗುರುತಿಸಿರುವ ತನಿಖಾ ತಂಡ, ಮಧ್ಯಂತರ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ವಿಹೆಚ್‌ಪಿ ಪ್ರತಿಕ್ರಿಯೆ

ಈ ಆರೋಪಗಳ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !