Monday, October 2, 2023

Latest Posts

ಮಹಿಳಾ ಮೀಸಲಾತಿ ಬಿಲ್ ನಮ್ಮದು: ಸೋನಿಯಾ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯ ಸಂಸತ್‌ನಲ್ಲಿ 14.4%ರಷ್ಟು ಮಾತ್ರ ಮಹಿಳೆಯರಿದ್ದಾರೆ, ಈಗಷ್ಟೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದ್ದು, ಈ ಮೀಸಲಾತಿ ನಮ್ಮದು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

2027ರ ವೇಳೆ ಮಹಿಳಾ ಮೀಸಲಾತಿ ಮಸೂದೆ ಸಂಪೂರ್ಣವಾಗಿ ಜಾರಿಯಾಗಲಿದೆ, ಇದು ಸಂಸದರಿಗೆ ಅಗ್ನಿಪರೀಕ್ಷೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇನ್ನು ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕ್ರೆಡಿಟ್ ತೆಗೆದುಕೊಳ್ಳೋಕೆ ತಯಾರಾಗಿದ್ದಾರೆ.

ಲೋಕಸಭೆಗೆ ಆಗಮಿಸುವಾಗ ಮಹಿಳಾ ಮೀಸಲಾತಿ ಮಸೂದೆ ನಮ್ಮದು. ನಮ್ಮ ಸರ್ಕಾರವೇ ಮೊದಲ ಸಂಸತ್‌ನಲ್ಲಿ ಮಂಡನೆ ಮಾಡಿದ್ದು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!