September 29, 2026
Tuesday, September 29, 2026
spot_img

ಪಲ್ಯ, ಗ್ರೇವಿ & More 85 | ಉತ್ತರ ಕರ್ನಾಟಕದ ಸ್ಪೆಷಲ್ ಗಟ್ಟಿ ಶೇಂಗಾ ಚಟ್ನಿ ತಯಾರಿಸುವ ಸುಲಭ ರೆಸಿಪಿ ಇಲ್ಲಿದೆ

ಶೇಂಗಾ ಚಟ್ನಿ ಅಥವಾ ಕಡಲೇಕಾಯಿ ಚಟ್ನಿ ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕದ ಮನೆಮನೆಗಳಲ್ಲಿ ದಿನನಿತ್ಯ ಬಳಸುವ ಒಂದು ಅತ್ಯಂತ ಜನಪ್ರಿಯ ಮತ್ತು ಪೌಷ್ಟಿಕಾಂಶ ಭರಿತ ಸೈಡ್ ಡಿಶ್ ಆಗಿದೆ. ಉತ್ತರ ಕರ್ನಾಟಕ ಭಾಗದಲ್ಲಂತೂ ಈ ಚಟ್ನಿ ಇಲ್ಲದೆ ಯಾವುದೇ ಊಟ ಪೂರ್ಣವಾಗುವುದಿಲ್ಲ.

ಬೇಕಾಗುವ ಸಾಮಾಗ್ರಿಗಳು:
ಶೇಂಗಾ
ಹಸಿ ಮೆಣಸಿನಕಾಯಿ
ಬೆಳ್ಳುಳ್ಳಿ
ಹುಣಿಸೇಹಣ್ಣು
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಒಣ ಮೆಣಸಿನಕಾಯಿ
ನೀರು

ತಯಾರಿಸುವ ವಿಧಾನ:

ಮೊದಲು ಒಂದು ಬಾಣಲೆಯಲ್ಲಿ ಶೇಂಗಾ ಬೀಜಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಅವುಗಳನ್ನು ತಣ್ಣಗಾಗಲು ಬಿಡಬೇಕು. ಅದೇ ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಹಸಿರು ಮೆಣಸಿನಕಾಯಿಗಳನ್ನು ಸ್ವಲ್ಪ ಬಾಡಿಸಿಕೊಳ್ಳಬೇಕು. ಮಿಕ್ಸಿ ಜಾರಿಗೆ ಹುರಿದ ಶೇಂಗಾ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಿಸೇಹಣ್ಣು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೊದಲು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಬೇಕು. ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ, ಅದನ್ನು ಚಟ್ನಿಗೆ ಸೇರಿಸಿ ಮಿಶ್ರಣ ಮಾಡದರೆ ರುಚಿರುಚಿಯಾದ ಶೇಂಗಾ ಚಟ್ನಿ ಸಿದ್ಧವಾಗುತ್ತದೆ. ಇದನ್ನು ಇಡ್ಲಿ, ದೋಸೆ, ರೊಟ್ಟಿ ಜತೆ ಸವಿಯಬಹುದು.

Must Read