Wednesday, June 7, 2023

Latest Posts

“‘ಘನ ಇಂಧನ” ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದೆ. ‘ಘನ ಇಂಧನ’ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರುವುದಾಗಿ ದೇಶದ ಸರ್ಕಾರಿ ಮಾಧ್ಯಮ ಶುಕ್ರವಾರ ಬಹಿರಂಗಪಡಿಸಿದೆ. ಪರಮಾಣು ದಾಳಿಯನ್ನು ಎದುರಿಸುವ ಗುರಿಯಲ್ಲಿ ಇದು ಒಂದು ಹೆಜ್ಜೆ ಮುಂದಿದೆ ಎಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಹಸಾಂಗ್-18 ಎಂದು ಕರೆಯಲ್ಪಡುವ ಖಂಡಾಂತರ ಕ್ಷಿಪಣಿಯು ತನ್ನ ಕಾರ್ಯತಂತ್ರದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಪರಮಾಣು ದಾಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕಿಮ್ ಹೇಳಿದ್ದಾರೆ.

ರಾಜಧಾನಿಯ ಪ್ಯೊಂಗ್ಯಾಂಗ್ ಪ್ರದೇಶದಿಂದ 1,000 ಕಿಲೋಮೀಟರ್ ಪ್ರಯಾಣಿಸಿದ ಲ್ಯಾಪ್ಡ್ ಪಥದಲ್ಲಿ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಗುರುವಾರ ದೃಢಪಡಿಸಿದೆ. ಉತ್ತರ ಕೊರಿಯಾದ ಪರಮಾಣು ಕ್ಷಿಪಣಿಗಳು ಬಹುತೇಕ ಎಲ್ಲಾ ದ್ರವ ಇಂಧನದಿಂದ ಕೂಡಿರುತ್ತವೆ. ಆದರೆ ಭೂಮಿ ಮತ್ತು ಜಲಾಂತರ್ಗಾಮಿ ಉಡಾವಣೆ ಘನ ಇಂಧನ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲು ಕಿಮ್ ದೀರ್ಘಕಾಲ ಒತ್ತಾಯಿಸಿದ್ದಾರೆ. ಇತ್ತೀಚಿನ ಪ್ರಯೋಗದಿಂದ ಅವರ ಆಸೆ ಈಡೇರಿದೆ.

ದಕ್ಷಿಣ ಕೊರಿಯಾ ಮತ್ತು ಅಮೆರಿಕ ಸೇನಾ ಸಮರಾಭ್ಯಾಸ ನಡೆಸಿದ ನಂತರ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಈ ಪ್ರಯೋಗಗಳಿಗೆ ಹೆದರುತ್ತವೆ. ಆದಾಗ್ಯೂ, ಉತ್ತರ ಕೊರಿಯಾ ತನ್ನ ರಕ್ಷಣೆಗಾಗಿ ಮತ್ತು ಅಮೆರಿಕವನ್ನು ತಡೆಯಲು ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಬಹಿರಂಗಪಡಿಸಿದೆ. ಏಪ್ರಿಲ್ 15 ರಂದು ಉತ್ತರ ಕೊರಿಯಾ ಪ್ರಮುಖ ರಾಜಕೀಯ ದಿನಗಳಲ್ಲಿ ಒಂದಾದ ʻಡೇ ಆಫ್‌ ಸನ್‌ʼ ಮುನ್ನಾದಿನದಂದು ಈ ಪ್ರಯೋಗವನ್ನು ನಡೆಸಲಾಯಿತು. ಈ ದಿನಾಂಕವು ಉತ್ತರ ಕೊರಿಯಾದ ಸಂಸ್ಥಾಪಕ ನಾಯಕ ಕಿಮ್ ಇಲ್ ಸುಂಗ್ ಅವರ ಜನ್ಮದಿನವನ್ನು ಸೂಚಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!