ಹೊಸದಿಗಂತ ವರದಿ ಕಲಬುರಗಿ:
ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಯವರೆಗೆ ಒಟ್ಟು 15,012 ಮತಗಳು ಚಲಾವಣೆಯಾಗಿದ್ದು, ಶೇ.43.16ರಷ್ಟು ಮತದಾನವಾಗಿದೆ.
ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ಒಟ್ಟು 34,784 ಮತದಾರರಿದ್ದು, ಈ ಪೈಕಿ 20,040 ಪುರುಷರು ಹಾಗೂ 14,744 ಮಹಿಳೆಯರು ಮತದಾರರ ಪಟ್ಟಿಯಲ್ಲಿದ್ದಾರೆ. ಮಧ್ಯಾಹ್ನ 12 ಗಂಟೆಯವರೆಗೆ 9,054 ಪುರುಷರು ಮತ್ತು 5,958 ಮಹಿಳೆಯರು ಸೇರಿ ಒಟ್ಟು 15,012 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲಾವಾರು ಮತದಾನದ ವಿವರ ಹೀಗಿದೆ
ಕಲಬುರಗಿ-4,360 ಮತಗಳು
ಬೀದರ್-2,756 ಮತಗಳು
ರಾಯಚೂರು-2,462 ಮತಗಳು
ವಿಜಯನಗರ- 1,620 ಮತಗಳು
ಬಳ್ಳಾರಿ-1,453 ಮತಗಳು
ಕೊಪ್ಪಳ-1,354 ಮತಗಳು
ಯಾದಗಿರಿ-1,007 ಮತಗಳು
ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 4,360 ಮತಗಳು ಚಲಾವಣೆಯಾಗಿವೆ. ಜಿಲ್ಲೆಯ ಒಟ್ಟು 10,652 ಮತದಾರರ ಪೈಕಿ 2,501 ಪುರುಷರು ಹಾಗೂ 1,859 ಮಹಿಳೆಯರು ಮತ ಚಲಾಯಿಸಿದ್ದಾರೆ.



