ಈ ಸರ್ಕಾರದ ಕೆಲವು ಕೆಲಸಗಳ ಬಗ್ಗೆ ತೃಪ್ತಿ ಇಲ್ಲ: ನಟ ಯಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರ್ಕಾರ ಯಾವುದೇ ಆಗಲಿ ಕೆಲಸ ಅಚ್ಚುಕಟ್ಟಾಗಿರಬೇಕು. ಈಗಿರುವ ಸರ್ಕಾರದ ಕೆಲವು ಕೆಲಸಗಳು ತೃಪ್ತಿ ನೀಡಿಲ್ಲ, ಕೆಲವು ಕೆಲಸಗಳು ತುಂಬಾ ಖುಷಿ ಕೊಟ್ಟಿವೆ ಎಂದು ರಾಕಿಂಗ್‌ ಸ್ಟಾರ್‌ ಯಶ್‌ ಹೇಳಿದ್ದಾರೆ.

ವೋಟ್‌ ಮಾಡಿದ ನಂತರ ಮಾತನಾಡಿ, ಎಲ್ಲರೂ ಓಟ್​ ಮಾಡಲೇಬೇಕು. ಅದು ನಮ್ಮ ಕರ್ತವ್ಯ ಮತ್ತು ಹಕ್ಕು. ಮತದಾನಕ್ಕೆ ಅವಕಾಶ ಸಿಕ್ಕ ನಂತರ ನಿಮ್ಮ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕು. ಎಲ್ಲವನ್ನೂ ಗಮನಿಸಿ ಕಲಿಯಬೇಕು. ಓಟಿಂಗ್​ ಜಾಸ್ತಿ ಆದರೆ ಜಾಗೃತಿ ಜಾಸ್ತಿ ಆಗಿದೆ ಅಂತ ಅರ್ಥ. ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!