ಹೊಸದಿಗಂತ ವರದಿ, ಕಲಬುರಗಿ:
ವಿಕೇಂಡ್ ಕಫ್ಯೂ೯ ನಿಮಿತ್ತ ಅನಾವಶ್ಯಕ ಹೊರಗಡೆ ಬರಬಾರದು ಎಂದು ಹೇಳಿ,ಶುಕ್ರವಾರ ರಾತ್ರಿ ಕಲಬುರಗಿ ಜನರಿಗೆ ಪೋಲಿಸರು ಮನವರಿಕೆ ಮಾಡಿಕೊಂಡರು.
ನಗರದ ಸದಾ೯ರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಪೋಲಿಸರಿಂದ ಮೈಕ್ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆದಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ರ,ವರೆಗೂ ವಿಕೇಂಡ್ ಕಫ್ಯೂ೯ ವಿಧಿಸಲಾಗಿದೆ. ಹೀಗಾಗಿ ಕೋರೋನಾ ನಿಯಮಗಳನ್ನು ಪಾಲಿಸಿ, ಮನೆಯಲ್ಲಿ ಇರೀ, ಅನಾವಶ್ಯಕ ಹೊರಬರಬೇಡಿ ಎಂದು ಮೈಕ ಮೂಲಕ ಜಾಗೃತಿ ಕೆಲಸ.ಮಾಡಿದರು.
ನಿದ್ದೆ ಬತಿ೯ಲ್ಲಾ,ಚಹಾ ಕುಡಿಯೋಕೆ ಬತೀ೯ದ್ದೇವೆ,ಪಾನ ಬಿಡಾ, ಗುಟಕಾ ಖರೀದಿ ನೆಪವೊಡ್ಡಿ ಹೊರ ಬರಬೇಡಿ,ಒಂದು ವೇಳೆ ಬಂದರೆ ಪೋಲಿಸರು ತಮ್ಮ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ನೈಟ್ ಕಫ್ಯೂ೯,ವಿಕೇಂಡ್ ಕಫಫ್ಯೂ೯ ಇದ್ದ ಕಾರಣ ಹೊರ ಬರುವ ಮುನ್ನ ಯೋಚಿಸಿ ಎಂದು ತಾಕಿತು ಮಾಡಿ, ಅನಾವಶ್ಯಕ ಹೊರ ಬಂದರೆ. ನಿದಾ೯ಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.