ಅಲಹಾಬಾದ್ ವಿವಿ ಶುಲ್ಕ ಹೆಚ್ಚಳ: ಗುಂಡಿ ತೋಡಿ, ಮೈಮೇಲೆ ಮಣ್ಣು ಎಳೆದುಕೊಳ್ಳುತ್ತಿರೋ ವಿದ್ಯಾರ್ಥಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ಖಂಡಿಸಿ ವಿದ್ಯಾರ್ಥಿಗಳು ಎರಡು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಅತಿರೇಕಕ್ಕೆ ತಲುಪಿದ್ದು, ವಿದ್ಯಾರ್ಥಿಗಳು ಜೀವಂತ ಸಮಾಧಿಯಾಗಲು ಹೊರಟಿದ್ದಾರೆ. ಗುಂಡಿ ತೋಡಿ, ಅದರಲ್ಲಿ ಮಲಗಿ ತಮ್ಮ ಮೇಲೆ ತಾವೇ ಮಣ್ಣು ಎಳೆದುಕೊಳ್ಳುತ್ತಿದ್ದಾರೆ.
ಪೊಲೀಸರು ತಕ್ಷಣವೇ ಧಾವಿಸಿದ್ದು, ವಿದ್ಯಾರ್ಥಿಗಳನ್ನು ಗುಂಡಿಯಿಂದ ಹೊರತೆಗೆದಿದ್ದಾರೆ.
ಏಕಾಏಕಿ ಶುಲ್ಕ ಹೆಚ್ಚಿಸಿದರೆ ನಾವು ಹೇಗೆ ಕಾಲೇಜಿಗೆ ಬರುವುದು, ಶೇ.300ರಿಂದ 400ರಷ್ಟು ಹೆಚ್ಚಳ ಮಾಡಿದ್ದು, ಹಳೆಯ ಶುಲ್ಕ ಪಾವತಿಗೆ ಒಪ್ಪದಿದ್ದರೆ ಇಲ್ಲಿಯೇ ಪ್ರಾಣಕಳೆದುಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಆದರೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಜಗ್ಗದ ಮುಖ್ಯಸ್ಥರು, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಇದು ಹೊಸತಾಗಿ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಎಂದು ಹೇಳಿದ್ದಾರೆ. ಪದವಿ ಕೋರ್ಸ್‌ಗಳಿಗೆ ಈ ಹಿಂದೆ ಸಾವಿರ ರೂ. ಶುಲ್ಕವಿದ್ದು, ಇದೀಗ ಶುಲ್ಕ ನಾಲ್ಕು ಸಾವಿರ ರೂ.ಗಳಾಗಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!