ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನುಷ ಘಟನೆ ನಡೆದಿದೆ. ಒಬ್ಬ ನರ್ಸ್ ಮಹಿಳಾ ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ಅನಾರೋಗ್ಯದ ನಿಮಿತ್ತ ಸೀತಾಪುರ ಜಿಲ್ಲಾಸ್ಪತ್ರೆಗೆ ಮಹಿಳಾ ರೋಗಿ ದಾಖಲಾಗಿದ್ದರು. ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ನರ್ಸ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.
ರೋಗಿಯ ಕೂದಲು ಹಿಡಿದು ಹಾಸಿಗೆಯ ಮೇಲೆ ಎಸೆದಿದ್ದಾರೆ. ಮಹಿಳೆ ರೋಗಿಯೊಂದಿಗೆ ನರ್ಸ್ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಕೆ.ಸಿಂಗ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಮಹಿಳೆ ಮಧ್ಯರಾತ್ರಿ ವಿಚಿತ್ರವಾಗಿ ವರ್ತಿಸಿದ್ದಾರೆ.
ಆಕೆಯನ್ನು ನಿಯಂತ್ರಿಸಲು ದಾದಿಯರು ಹೀಗೆ ಮಾಡಬೇಕಾಯಿತು. ಚುಚ್ಚುಮದ್ದು ನೀಡಿ ನಂತರ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
उत्तर प्रदेश के सरकारी अस्पतालों का हाल देखिए
डॉक्टर और नर्स महिला मरीज के बाल खींचकर धक्का देते हुए बेड पर लेटा रहे हैं
सीतापुर के सरकारी अस्पताल का वीडियो बताया जा रहा है pic.twitter.com/CsCB24EVrr
— Bolta Hindustan (@BoltaHindustan) October 27, 2022