ರುಚಿ..ರುಚಿಯಾಗಿ..ಘಮ ಘಮ ವಾಸನೆ ಭರಿತ ಓಟ್ಸ್‌ ಕಿಚಡಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬರೀ ಹಾಲಿನೊಂದಿಗೆ ಓಟ್ಸ್‌ ತಿಂದು ಬೇಜಾರಾಗಿದ್ಯಾ, ಹಾಗಿದ್ರೆ ಈ ರೀತಿ ಓಟ್ಸ್ ಕಿಚಡಿ ಮಾಡಿ ಬಹಳ ಸುಲಭ ಹಾಗೆ ರುಚಿ ಕೂಡ

ಬೇಕಾಗುವ ಸಾಮಗ್ರಿಗಳು: 

1 ಕಪ್ ಓಟ್ಸ್, ಅರ್ಧ ಕಪ್‌ ಹೆಸರುಬೇಳೆ
1/4 ಹಸಿ ಬಟಾಣಿ
2 ಟೊಮ್ಯಾಟೊ
1 ಕ್ಯಾಪ್ಸಿಕಂ
2 ಕತ್ತರಿಸಿದ
1 ಕ್ಯಾರೆಟ್
1 ಟೇಬಲ್ಸ್ಪೂನ್ ಎಣ್ಣೆ
1 ಟೇಬಲ್ಸ್ಪೂನ್ ತುಪ್ಪ
1 ಟೀಚಮಚ ಜೀರಿಗೆ
4/5  ಹಸಿ ಮೆಣಸಿನಕಾಯಿ
ಕರಿಬೇವಿನ ಎಲೆ
1/2 ಟೀಚಮಚ ಅರಿಶಿನ ಪುಡಿ
ಉಪ್ಪು ರುಚಿಗೆ ತಕ್ಕಷ್ಟು
3 ಕಪ್ ನೀರು
1/4 ಟೀಚಮಚ ಮೆಣಸು

ಮಾಡುವ ವಿಧಾನ:

ಮೊದಲಿಗೆ ಹೆಸರು ಬೇಳೆಯನ್ನು ಬೇಯಿಸಿಕೊಳ್ಳಿ, ಮತ್ತೊಂದು ಪಾತ್ರೆ ಅಥವಾ ಬಾಣಲೆಗೆ ತುಪ್ಪ ಹಾಕಿ ಓಟ್ಸ್‌ ಅನ್ನು ಹುರಿದುಕೊಳ್ಳಿ. ನಂತರ ಅದೇ ಪಾತ್ರೆಗೆ ಎಣ್ಣೆ ಹಾಕಿ ಕಾದ ಬಳಿಕ ಜೀರಿಗೆ, ಈರುಳ್ಳಿ ಹಾಕಿ ಮೆತ್ತಗಾಗುವವರೆಗೂ ಬೇಯಿಸಿ. ಅದಕ್ಕೆ ಹಸಿ ಮೆಣಸಿಕಾಯಿ. ಹೆಚ್ಚಿದ ಕ್ಯಾರೆಟ್‌, ಆಲೂ, ಕ್ಯಾಪ್ಸಿಕಂ, ಟೊಮ್ಯಾಟೋ, ನಿಮ್ಮಿಷ್ಟದ ತರಕಾರಿ ಜೊತೆಗೆ ಹಸಿ ಬಟಾಣಿ ಹಾಕಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ ಬೇಯಿಸಿ. ಸ್ವಲ್ಪ ಸಮಯದ ನಂತರ ಬೇಯಿಸಿದ ಹೆಸರು ಬೇಳೆ ಜೊತೆಗೆ ಅರಿಶಿನ ಪುಡಿ ಹಾಕಿ ಕಲಕಿ ಮತ್ತೊಮ್ಮೆ ಬೇಯಿಸಿ. ಅದಕ್ಕೆ ಮೂರು ಕಪ್‌ ನೀರು ಹಾಕಿ ಚೆನ್ನಾಗಿ ಕುದಿಸಿ ಕುದಿ ಬಂದ ಮೇಲೆ ಓಟ್ಸ್‌ ಹಾಕಿ ತಿರುವಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಪ್ಲೇಟ್‌ ಮುಚ್ಚಿ ಬೇಯಿಸಿ ಕೊನೆಗೆ ಪೆಪ್ಪರ್‌ ಪೌಡರ್‌ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್‌ ಮಾಡಿ. ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು ರುಚಿಯೂ ಹೌದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!