Sunday, November 27, 2022

Latest Posts

ಏಕದಿನ ಸರಣಿ: ಭಾರತಕ್ಕೆ 279 ರನ್​ ಟಾರ್ಗೆಟ್ ನೀಡಿದ ದಕ್ಷಿಣ ಆಫ್ರಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 279 ರನ್​ಗಳ ಗೆಲುವಿನ ಗುರಿ ನೀಡಿದೆ.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆಫ್ರಿಕಾ ಐಡೆನ್ ಮಾರ್ಕ್ರಮ್(79) ಮತ್ತು ರೀಜಾ ಹೆಂಡ್ರಿಕ್ಸ್(74) ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 278 ರನ್​​ ಪೇರಿಸಿದೆ.
ಡಿ ಕಾಕ್​ 5, ಜಾನೆಮನ್​ ಮಲನ್​ 25, ಕ್ಲಾಸಿನ್​ 30, ಡೇವಿಡ್​ ಮಿಲ್ಲರ್ ಅಜೇಯ​ 35 ಹಾಗೂ ವೇಯ್ನ್​ ಪಾರ್ನೆಲ್​ 16 ರನ್​ ಬಾರಿಸಿದರು. ತಂಡದ ನಾಯಕ ಕೇಶವ್​ ಮಹಾರಾಜ್​ 5 ರನ್​ ಗಳಿಸಿದರು.
ಭಾರತದ ಪರ ಸಿರಾಜ್​ 3 ವಿಕೆಟ್​ ಪಡೆದರೆ, ಸುಂದರ್​, ಶಹ್ಬಾಜ್​ ಅಹಮದ್​, ಕಲದೀಪ್​ ಯಾದವ್​ ಹಾಗೂ ಶಾರ್ದುಲ್​ ಠಾಕೂರ್​ ತಲಾ ಒಂದು ವಿಕೆಟ್​ ಕಬಳಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!