ಬರೋಬ್ಬರಿ 10 ಸಾವಿರ ಮಹಿಳೆಯರ ಬಾಳಲ್ಲಿ ಇನ್ನಷ್ಟು ಬಲ ತುಂಬಲಿದೆ ಈ ಒಪ್ಪಂದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಡಿಶಾ ಸರಕಾರ ಮಹಿಳಾ ಸಬಲೀಕರಣದತ್ತ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದು, ಬರೋಬ್ಬರಿ ಹತ್ತು ಸಾವಿರ ಮಂದಿಯ ಬದುಕಿಗೆ ಇನ್ನಷ್ಟು ಬಲ ತುಂಬಲು ಹೊಸ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಒಡಿಶಾ ಮಿಷನ್ ಶಕ್ತಿ, ಈಗ ಅಪ್ಯಾರಲ್ ಮೇಡ್‌ಅಪ್‌, ಮತ್ತು ಹೋಮ್ ಫರ್ನಿಶಿಂಗ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ (AMHSSC) ಜೊತೆ ಒಪ್ಪಂದಕ್ಕೆ ಮುಂದಾಗಿದ್ದು, ಇದು ಉಡುಪು ತಯಾರಿಕೆ ಕ್ಷೇತ್ರದಲ್ಲಿ 10 ಸಾವಿರ ಮಿಷನ್ ಶಕ್ತಿ ಮಹಿಳಾ ಸ್ವ ಸಹಾಯ ಸದಸ್ಯರ ಕೌಶಲ್ಯ ಅಭಿವೃದ್ಧಿಪಡಿಸಲು ನೆರವಾಗಲಿದೆ.

ಮಿಷನ್ ಶಕ್ತಿ ಇಲಾಖೆ ಶಾಲೆ-ಕಾಲೇಜು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಸಮವಸ್ತ್ರ ಹೊಲಿಗೆ ಮತ್ತು ಪೂರೈಕೆಯಲ್ಲಿ ತೊಡಗಿಸಿಕೊಂಡಿವೆ. ಹೊಸ ಒಪ್ಪಂದದಿಂದಾಗಿ ಈಗ ಇನ್ನಷ್ಟು ಉದ್ಯೋಗಾವಕಾಶ ಹೆಚ್ಚಲಿದೆ.

ಟೈಲರಿಂಗ್ ಕೌಶಲಗಳನ್ನು ಹೊಂದಿರುವ ಸ್ವ-ಸಹಾಯ ಗುಂಪು (SHG) ಸದಸ್ಯರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಕೂಡಾ ಒಪ್ಪಂದ ನೆರವಾಗಲಿದ್ದು, ಮುಂದಿನ 18 ತಿಂಗಳ ಅವಧಿಯಲ್ಲಿ ಯೋಜನೆ ಅನುಷ್ಠಾನಗೊಳೊಸಲು ಸರ್ಕಾರ ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!