ಹೊಸ ದಿಗಂತ ವರದಿ, ಮಡಿಕೇರಿ:
ನೀರಿನ ಟ್ಯಾಂಕ್ ನಿರ್ಮಿಸಲು ತೆಗೆಯಲಾಗಿದ್ದ ಗುಂಡಿಗೆ ಬಿದ್ದು ಮರಿಯಾನೆ ಸಾವಿಗೀಡಾದ ಘಟನೆ ಶನಿವಾರಸಂತೆ ಸಮೀಪ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಎಳನೀರುಗುಂಡಿಯ ಚಂದ್ರಶೇಖರ್ ಎಂಬವರು ತಮಗೆ ಸೇರಿದ ತೋಟದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಗುಂಡಿ ತೆಗೆದಿದ್ದರೆನ್ನಲಾಗಿದ್ದು, ಅದಕ್ಕೆ ರಾತ್ರಿ ವೇಳೆ ಮರಿಯಾನೆ ಬಿದ್ದಿದೆ ಎನ್ನಲಾಗಿದೆ.
ಸ್ಥಳಕ್ಕೆ ವಲಾಯಾರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕ್ರೇನ್ ಮೂಲಕ ಗುಂಡಿಯಿಂದ ಆನೆಯನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.