ಕಡ್ಲೆ ಸಮುದ್ರ ತೀರದಲ್ಲಿ ಕಣ್ಮನ ಸೆಳೆಯುತ್ತಿರುವ ಮರಳಿನಲ್ಲಿ ಮೂಡಿದ ಶಿವ!

ಹೊಸ ದಿಗಂತ ವರದಿ, ಕುಮಟಾ:

ಶಿವರಾತ್ರಿಯಂದು ಭಕ್ತರು ನಗರದ ಶಿವ ದೇವಾಲಯಗಳಿಗೆ ತೆರಳಿ ಶಿವನಿಗೆ ಪೂಜಾಕೈಂಕರ್ಯಗಳನ್ನು ನಡೆಸಿ ಭಕ್ತಿ ಅರ್ಪಿಸಿದರು. ತಾಲೂಕಿನ ಕಡ್ಲೆ ಸಮುದ್ರ ತೀರದಲ್ಲಿ ಮರಳಿನಿಂದ ತಯಾರಿಸಿದ ಶಿವನಮೂರ್ತಿ ಭಕ್ತರನ್ನು ಸೆಳೆಯಿತು. ಶಿವರಾತ್ರಿ ಯಂದು ಪ್ರತೀ ವರ್ಷ ವಿವಿಧ ಭಂಗಿಗಳಲ್ಲಿ ಶಿವನ ಮೂರ್ತಿಗಳನ್ನು ಮರಳಿನಲ್ಲಿ ರಚಿಸುವುದು ಇಲ್ಲಿಯ ವಿಶೇಷತೆಯಾಗಿದೆ.

ಕಲಾಕಾರ ವೆಂಕಟ್ರಮಣ ಆಚಾರಿ ಹಾಗೂ ಪುರಂದರ ಆಚಾರಿ ಹಾಗೂ ಸ್ಥಳೀಯ ಯುವಕರು ಸೇರಿ ಶಿವನ ಮುಖ‌ ಹಾಗೂ ಕೊರಳಲ್ಲಿ ನಾಗನನ್ನು ಪ್ರತಿಯೆಗಾಗಿ ರೂಪಿಸುವ ಮೂಲಕ ಎಲ್ಲರ ಗಮನ ಸೆಳೆದರು. ಬೆಳಗ್ಗೆಯಿಂದಲೇ ಸಮುದ್ರ ತೀರಕ್ಕೆ ಆಗಮಿಸಿದ ಅನೇಕ ಜನ ಭಕ್ತರು ಶಿವನ ಪ್ರತಿಮೆಯನ್ನು ತುಂಬಿಕೊಂಡರು ಕಲಾವಿದರ ಕಲಾ ಚಾತುರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!