ಬೀದರ್ ವಾಯು ನೆಲೆಗೆ ಅಧಿಕಾರಿಗಳ ಭೇಟಿ

ಹೊಸದಿಗಂತ ವರದಿ,ಬೀದರ್

ಭಾರತೀಯ ವಾಯು ಸೇನೆ ತರಬೇತಿ ವಿಭಾಗದ ಮುಖ್ಯಸ್ಥ ಏರ್ ಮಾರ್ಷಲ್ ಮಾನ ವೇಂದ್ರ ಸಿಂಗ್ ಅವರು ಬೀದರ್ ವಾಯು ನೆಲೆಗೆ ಎರಡು ದಿನದ ಭೇಟಿಗೆ ಆಗಮಿಸಿದ್ದರು.
ಅವರು ಫೆಬ್ರುವರಿ 8 ರಂದು ಆಗಮಿಸಿದರು. ಅವರನ್ನು ಬೀದರ್ ವಾಯು ನೆಲೆಯ ಮುಖ್ಯಸ್ಥ ಏರ್ ಕಮೊಡೋರ ಸಮೀರ್ ಸೊಂಧಿ ಅವರು ಸ್ವಾಗತಿಸಿದರು. ವಾಯು ಸೈನಿಕರು ಅವರಿಗೆ ಗೌರವ ವಂದನೆ ಸಮರ್ಪಿಸಿದರು.
ಸಿಂಗ್ ಅವರು ವಾಯು ನೆಲೆಯ ವಿವಿಧ ವಿಭಾಗ ಗಳಿಗೆ ಭೇಟಿ ನೀಡಿದರು. ಸಿಬ್ಬಂದಿ, ವಿದ್ಯಾರ್ಥಿ ಹಾಗೂ ಸ್ಥಳೀಯ ನಾಗರಿಕ ರೊಂದಿಗೆ ಮಾತು ಕತೆ ನಡೆಸಿದರು. ಅವರು ಇಲ್ಲಿನ ಆಡಳಿತ, ತರಬೇತಿ ಹಾಗೂ ಇತರ ವಿಭಾಗ ಗಳಿಗೆ ಭೇಟಿ ನೀಡಿದರು. ಅಲ್ಲಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಗಳೊಂದಿಗೆ ಮಾತನಾಡಿದ ಅವರು ಸರ್ವ ಸಿಬ್ಬಂದಿ ತಮ್ಮ ಸಕಲ ಪ್ರಯತ್ನ ಗಳನ್ನು ಸಮರ್ಪಕ ವಾಗಿ ಪೂರೈಸಬೇಕು ಎಂದು ಕಿವಿ ಮಾತು ಹೇಳಿದರು. ವಾಯು ಸೇನೆ ಹಾಗೂ ಭಾರತ ದೇಶ ತಮ್ಮ ಬಗ್ಗೆ ಹೆಮ್ಮೆ ಪಡುವಂತೆ ಕಾರ್ಯ ನಿರ್ವಹಿಸುವಂತೆ ಅವರು ನಿರ್ದೇಶನ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!