Thursday, October 6, 2022

Latest Posts

ನಾವೇನ್‌ ಕಮ್ಮಿ ಇಲ್ಲ! ಯುವಕರೊಂದಿಗೆ ವೃದ್ಧರ ಕಬಡ್ಡಿ ಜಟಾಪಟಿ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಳ್ಳಿ ಸೊಗಡಿನ ಕಬಡ್ಡಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಶಾಲಾ/ಕಾಲೇಜು ಸೇರಿದಂತೆ ಹಳ್ಳಿಗಳಲಿ ಇವತ್ತಿಗೂ ಈ ಆಟ ಫೇಮಸ್.‌ ಸಾಮಾನ್ಯವಾಗಿ ಯುವಕ/ಯುವತಿಯರು ಕಬಡ್ಡಿ ಆಡೋದನ್ನು ನೋಡಿರುತ್ತೇವೆ. ಸಮಾನ ವಯಸ್ಕರೊಂದಿಗೆ ಸೆಣಸಾಟ ಆದ್ರೆ ಓಕೆ ಆದ್ರೆ ಈ ಊರಲ್ಲಿ ಯುವಕರಿಗೇ ಸವಾಲ್‌ ಹಾಕಿ ವೃದ್ಧರು ಫೀಲ್ಡಿಗಿಳಿದಿದ್ದಾರೆ. ನೀವೇನ್ರೋ ಆಡೋದು..ನಾವು ಆಡದೇ ಇರೋ ಆಟನಾ? ಬಸ್ತಿ ಮೇ ಸವಾಲ್‌ ಎಂದು ಹಿರಿಯರು ಸಹ ಕಬಡ್ಡಿ ಆಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ರಾಜಸ್ಥಾನ ಸರ್ಕಾರವು ರಾಜ್ಯದ 44 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಒಂದು ತಿಂಗಳ ಕಾಲ ರಾಜೀವ್ ಗಾಂಧಿ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದೆ. ಈ ಕ್ರೀಡೆಗಳಲ್ಲಿ ಭಾಗವಹಿಸಲು 30 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ರಾಜಸ್ಥಾನದಾದ್ಯಂತ ಆಟಗಳು ಮುಂದುವರೆದಿದ್ದು, ಹಳ್ಳಿಯೊಂದರಲ್ಲಿ ಯುವಕರು ಮತ್ತು ಹಿರಿಯರ ನಡುವಿನ ಕಬಡ್ಡಿ ಪಂದ್ಯವು ಗಮನ ಸೆಳೆದಿದೆ.

ಈ ವೀಡಿಯೊವನ್ನು ರಾಜಸ್ಥಾನ ಸರ್ಕಾರದ ಅಧಿಕೃತ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವೃದ್ಧರು ಯುವಕರ ವಿರುದ್ಧ ಕಬಡ್ಡಿ ಆಡುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮುದುಕರ ಶಕ್ತಿಗೆ ಬೆರಗಾಗಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ರೀ ಟ್ವೀಟ್ ಮಾಡುತ್ತಿದ್ದಾರೆ. “ಅಂಕಲ್ ಆ ಹುಲಿ” ಎಂದು ನೆಟ್ಟಗರು ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!