ರನ್‌ವೇ ಸುರಕ್ಷತಾ ಕ್ರಮ ಉಲ್ಲಂಘನೆ: ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರತದ ವಾಯುಯಾನ ನಿಯಂತ್ರಣ ಸಂಸ್ಥೆ ನಾಗರಿಕ ವಿಮಾನ ನಿರ್ದೇಶನಾಲಯ( ಡಿಜಿಸಿಎ) 20 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.

ವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ವಹಣೆ ಸೂಕ್ತವಾಗಿಲ್ಲ ಜೊತೆಗೆ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿರುವ ಕಾರಣ ದಂಡ ವಿಧಿಸಲಾಗಿದೆ. ಕೆಲವು ದಿನಗಳ ಹಿಂದೆ ಡಿಜಿಸಿಎ ವಿಮಾನ ನಿಲ್ದಾಣಗಳ ಸುರಕ್ಷತೆ ಪಾಲನೆ ಕುರಿತು ಆಡಿಟಿಂಗ್ ನಡೆಸಿತ್ತು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ನಿರ್ವಹಣೆ ಸರಿ ಇಲ್ಲ. ಗಂಭೀರ ಪ್ರಮಾಣದಲ್ಲಿ ಸುರಕ್ಷತಾ ನಿಯಮಗಳು ಉಲ್ಲಂಘಿಸಿದ್ದು ಕಂಡುಬಂದಿದ್ದು, ದಂಡ ವಿಧಿಸಲಾಗಿದೆ. ರನ್‌ವೇಗಳಲ್ಲಿ ಸುರಕ್ಷತಾ ಕ್ರಮ ಪಾಲಿಸದೇ ಇದ್ದರೆ ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ಮುಂಚೆಯೇ ಶೋಕಾಸ್ ನೊಟೀಸ್ ಕೂಡ ನೀಡಲಾಗಿತ್ತು ಎಂದು ಡಿಜಿಸಿಎ ಹೇಳಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!