ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೃದಯಾಘಾತದಿಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಧಾರವಾಡದ ನ್ಯಾಯಾಲಯದ ಬಳಿ ನಡೆದಿದೆ.
ಬಸವರಾಜ ವಿಠಲಾಪುರ ಮೃತಪಟ್ಟವರು. ಗದಗ ಸಶಸ್ತ್ರ ಮೀಸಲು ಪಡೆಯ ವಾಹನ ಚಾಲಕರಾಗಿ ಬಸವರಾಜ ಕಾರ್ಯ ನಿರ್ವಹಿಸುತ್ತಿದ್ದು, ಗದಗದಿಂದ ಧಾರವಾಡಕ್ಕೆ ಕೈದಿಯನ್ನು ಬಿಡಲು ಬಂದಿದ್ದರು.ವಾಹನ ಚಾಲನೆ ಮಾಡುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ರಸ್ತೆ ಪಕ್ಕಕ್ಕೆ ವಾಹನ ನಿಲ್ಲಿಸುತ್ತಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬಸವರಾಜ ಅವರ ಅಕಾಲಿಕ ನಿಧನಕ್ಕೆ ಗದಗ ಜಿಲ್ಲಾ ಪೊಲೀಸರು ಸಂತಾಪ ಸೂಚಿಸಿದ್ದಾರೆ.