ಬಿಹಾರದಲ್ಲಿ ಆಗಂತುಕರಿಂದ ಮನಬಂದಂತೆ ಗುಂಡಿನ ದಾಳಿ: ಓರ್ವ ಸಾವು, 11 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬಿಹಾರದ ಪಾಟ್ನಾ ನಗರದ ಬೇಗುಸರಾಯ್ ನಲ್ಲಿ ಜಿಲ್ಲೆಯಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಜನನಿಬಿಡ ಪ್ರದೇಶಗಳಲ್ಲಿ ಜನರ ಮೇಲೆ ಗುಂಡಿನ ಮಳೆಗೆರೆದ ಘಟನೆಯಲ್ಲಿ ಓರ್ವ ಸಾವನ್ನಪ್ಪಿ 11 ಜನರು ಗಾಯಗೊಂಡ ಘಟನೆ ನಡೆದಿದೆ.
ಮಂಗಳವಾರ ಸಂಜೆ ಬೈಕ್ ನಲ್ಲಿ‌ ಬಂದ ಇಬ್ಬರು ದುಷ್ಕರ್ಮಿಗಳು ಎನ್‌ಎಚ್ 31 ಮತ್ತು ಎನ್‌ಎಚ್ 28 ರ ಉದ್ದಕ್ಕೂ ಅಮಾಯಕ ಪಾದಚಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬರೌನಿ ಥರ್ಮಲ್ ಪವರ್ ಸ್ಟೇಷನ್ ಬಳಿಯ ರಸ್ತೆಯಿಂದ ಬಚ್ವಾರಾ ವರೆಗೆ ತಮ್ಮ ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿರುವಾಗಲೇ ಬಂದೂಕಿನಿಂದ ಬುಲೆಟ್‌ಗಳನ್ನು ಹಾರಿಸಿದ್ದಾರೆ. ನಾಲ್ಕು ವಿವಿಧ ಸ್ಥಳಗಳಲ್ಲಿ ಶೂಟೌಟ್‌ನ ನಡೆಸಿರುವ ಮಾಹಿತಿ ಸಿಕ್ಕಿದೆ ಎಂದು ಬೇಗುಸರೈ ಪೊಲೀಸ್ ಅಧೀಕ್ಷಕ ಯೋಗೇಂದ್ರ ಕುಮಾರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!