ಹೊಸದಿಗಂತ ವರದಿ, ಗೋಕರ್ಣ:
ಇಲ್ಲಿನ ಪಟ್ಟೆ ವಿನಾಯಕ ಗೆಳೆಯರ ಬಳಗದವರು ಕೋಟಿ ತೀರ್ಥದ ಸ್ವಚ್ಛತೆಗಾಗಿ ವಿವಿಧ ಜಾತಿಯ ಒಂದು ಲಕ್ಷ ಮೀನಿನ ಮರಿಯನ್ನು ಗುರುವಾರ ಸಂಜೆ ಬಿಟ್ಟಿದ್ದಾರೆ.
ತೀರ್ಥದ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿ ವರ್ಷ ಇವರು ಶಿವಮೊಗ್ಗಾದಿಂದ ಮೀನಿನ ಮರಿಗಳನ್ನು ತಂದು ಬಿಡುವ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ಅದರಂತೆ ಈ ವರ್ಷ ರಘು, ಗೌರಿ, ಕಾಟ್ಲಾ ಮತ್ತು ಗಿಡ ಬಳ್ಳಿಗಳನ್ನು ತಿನ್ನುವ ಗ್ರಾಸ್ ಕಾರ್ಪ್ ಎಂಬ ವಿಶೇಷ ಜಾತಿಯ ಮೀನಿನ ಮರಿಗಳನ್ನೂ ಸೇರಿ ಒಟ್ಟೂ ಒಂದು ಲಕ್ಷ ಮರಿಗಳನ್ನು ತಂದು ಬಿಡಲಾಯಿತು.