Monday, November 28, 2022

Latest Posts

ಪಾಕಿಸ್ತಾನ, ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು: ಯುಎಸ್ ಅಧ್ಯಕ್ಷ ಬಿಡೆನ್ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದೆಡೆ ಪಾಕಿಸ್ತಾನ ಸೇನೆಗೆ ಆರ್ಥಿಕ ನೆರವು ನೀಡಿದ ಅಮೆರಿಕ ಇದೀಗ ಅದರ ವಿರುದ್ಧವೇ ಟೀಕಾಪ್ರಹಾರ ನಡೆಸುತ್ತಿದೆ. ಯಾವುದೇ ಒಗ್ಗಟ್ಟಿಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನ ಕೂಡ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಬಣ್ಣಿಸಿದ್ದಾರೆ. ಲಾಸ್ ಏಂಜಲೀಸ್ (ಕ್ಯಾಲಿಫೋರ್ನಿಯಾ) ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿಯ ಸ್ವಾಗತ ಸಮಾರಂಭದಲ್ಲಿ US ಅಧ್ಯಕ್ಷರು ಈ ಟೀಕೆಗಳನ್ನು ಮಾಡಿದ್ದು, ಇದೇ ಸಂದರ್ಭದಲ್ಲಿ ಚೀನಾ ಮತ್ತು ರಷ್ಯಾ ವಿರುದ್ಧವೂ ಹರಿಹಾಯ್ದರು.

ಚೀನಾ ಮತ್ತು ರಷ್ಯಾಕ್ಕೆ ಸಂಬಂಧಿಸಿದಂತೆ ಯುಎಸ್ ವಿದೇಶಾಂಗ ನೀತಿಯ ಬಗ್ಗೆ ಬಿಡೆನ್ ಮಾತನಾಡುತ್ತಿರುವಾಗ ಪಾಕಿಸ್ತಾನದ ಬಗ್ಗೆ ಟೀಕೆಗಳನ್ನು ಮಾಡಲಾಗಿದೆ. ಪಾಕಿಸ್ತಾನವನ್ನು ವಿಶ್ವದ ಅತ್ಯಂತ ಅಪಾಯಕಾರಿ ದೇಶವೆಂದು ಪರಿಗಣಿಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಬಿಡೆನ್ ಅವರ ಹೇಳಿಕೆಗಳು ಯುಎಸ್ ಜೊತೆಗಿನ ಸಂಬಂಧಗಳನ್ನು ಸುಧಾರಿಸುವ ಶೆಹಬಾಜ್ ಷರೀಫ್ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಬಿಡೆನ್ ಆಡಳಿತ ಪ್ರಮುಖ ನೀತಿ ದಾಖಲೆಯೊಂದನ್ನು ಬಿಡುಗಡೆ ಮಾಡಿತು, ಚೀನಾ ಮತ್ತು ರಷ್ಯಾ ಎರಡೂ ಯುಎಸ್‌ಗೆ ಒಡ್ಡಿದ ಬೆದರಿಕೆಯನ್ನು ಒತ್ತಿಹೇಳಿದೆ. ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವು ಈ ವರ್ಷದ ಆರಂಭದಲ್ಲಿ ಯಾವುದೇ ಮಿತಿಯಿಲ್ಲದ ಪಾಲುದಾರಿಕೆಯನ್ನು ಘೋಷಿಸಿದ ಚೀನಾ ಮತ್ತು ರಷ್ಯಾ ಪರಸ್ಪರ ಹೆಚ್ಚು ಹೊಂದಿಕೊಂಡಿವೆ, ಜೊತೆಗೆ ಅವರು ಒಡ್ಡುವ ಸವಾಲುಗಳು ಕೂಡಾ ವಿಭಿನ್ನವಾಗಿವೆ. ಮುಂದಿನ ಹತ್ತು ವರ್ಷಗಳು ಚೀನಾದೊಂದಿಗೆ ಸ್ಪರ್ಧೆಯ ನಿರ್ಣಾಯಕ ದಶಕವಾಗಲಿದೆ ಎಂದು ಯುಎಸ್ ಭದ್ರತಾ ಕಾರ್ಯತಂತ್ರ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!