April 19, 2026
Sunday, April 19, 2026
spot_img

ಪಹಲ್ಗಾಮ್‌ ದಾಳಿಗೆ ಒಂದು ವರ್ಷ: ಪ್ರವಾಸಿಗರ ಸುರಕ್ಷತೆಗಾಗಿ ಹೊಸ ನಿಯಮ ಪರಿಚಯಿಸಿದ ಅಧಿಕಾರಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರವಾಸಿಗರ ಸ್ವರ್ಗವಾಗದ ಪಹಲ್ಗಾಮ್‌ ನಲ್ಲಿ ಲಷ್ಕರ್-ಎ-ತೈಬಾ ಭಯೋತ್ಪಾದಕರು ನಡೆಸಿದ ದಾಳಿಗೆ ಏ. 22ಕ್ಕೆ ಒಂದು ವರ್ಷವಾಗಲಿದ್ದು, ಸದ್ಯ ಅಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರ ನಡುವೆ ಪ್ರವಾಸಿಗರ ಇನ್ನಷ್ಟು ಸುರಕ್ಷತೆಗಾಗಿ ಅಧಿಕಾರಿಗಳು ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಎಲ್ಲ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗೆ ವಿಶಿಷ್ಟ ಕ್ಯುಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.

ಈ ಮೂಲಕ ಅಲ್ಲಿನ ನೋಂದಾಯಿತ ಸೇವಾ ಪೂರೈಕೆದಾರರನ್ನು ಸುಲಭವಾಗಿ ಪತ್ತೆ ಹಚ್ಚಲು ಜೊತೆಗೆ ಇತರೆ ಪರಿಶೀಲನೆಗಳಿಗೂ ಈ ಯೋಜನೆ ಉಪಯುಕ್ತವಾಗಲಿದೆ. ಅಲ್ಲಿನ ಕುದುರೆ ಸವಾರಿ ನಿರ್ವಾಹಕರು, ವ್ಯಾಪಾರಿಗಳು, ಮಾರಾಟಗಾರರು ಈ ನಿಯಮದಡಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯಿಂದ ತಟಸ್ಥವಾಗಿದ್ದ ಪಹಲ್ಗಾಮ್‌ ನಲ್ಲಿ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಹೀಗಾಗಿ ಮತ್ತೆ ಅವರಲ್ಲಿ ವಿಶ್ವಾಸವನ್ನು ಗಳಿಸಲು ಈ ಯೋಜನೆ ಜಾರಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಪ್ರತಿಯೊಬ್ಬ ಸೇವಾ ಪೂರೈಕೆದಾರರನ್ನು ಸರಿಯಾಗಿ ಪರಿಶೀಲಿಸಿ ಬಳಿಕ ಅಧಿಕಾರಿಗಳು ನೋಂದಾಯಿಸಿಕೊಂಡು ವೈಯಕ್ತಿಕ ಮಾಹಿತಿ ಹಾಗೂ ಇತರ ವಿವರಗಳನ್ನು ಒಳಗೊಂಡಿರುವ ವಿಶಿಷ್ಟ ಕ್ಯುಆರ್ ಕೋಡ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಮಯದಿಂದಾಗಿ ಪ್ರವಾಸಿಗರು ಮೊಬೈಲ್ ಫೋನ್‌ ಮೂಲಕ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಿಗಲಿದೆ. ಇದರಿಂದ ವಂಚನೆಯನ್ನು ತಡೆಯುವ ಮತ್ತು ಯಾವುದೇ ಅನಧಿಕೃತ ವ್ಯಕ್ತಿಗಳು ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಹಕಾರಿಯಾಗಲಿದೆ .

ಕ್ಯುಆರ್ ಕೋಡ್‌ ಗಳಲ್ಲಿ ಸೇವಾ ಪೂರೈಕೆದಾರರ ಹೆಸರು, ಪೋಷಕರು, ವಿವರವಾದ ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ನೋಂದಣಿ ಸಂಖ್ಯೆ, ಕಾರ್ಯಾಚರಣೆಯ ಮಾರ್ಗ ಮತ್ತು ಪೊಲೀಸ್ ಪರಿಶೀಲನೆಗೆ ಒಳಪಟ್ಟಿದ್ದಾರೆಯೇ ಎಂಬ ಅಂಶಗಳುಒಳಗೊಂಡಿರುತ್ತವೆ ಎಂದು ಅಧಿಕಾರಿಗಳು ವಿವರಿಸಿದರು.

ಸದ್ಯ ಕಾಶ್ಮೀರದಲ್ಲಿ ಒಟ್ಟಾರೆ ಭದ್ರತೆಯನ್ನು ಬಲಪಡಿಸಲಾಗಿದ್ದು, ಇದೀಗ ಸೇವಾ ಪೂರೈಕೆದಾರರ ವಿಷಯದಲ್ಲಿ, ದಾಖಲೆ ಪರಿಶೀಲನೆಯ ನಂತರ ನಮಗೆ ಕ್ಯುಆರ್ ಕೋಡ್‌ಗಳನ್ನು ನೀಡಲಾಗಿದೆ. ಈ ಮೂಲಕ ಸಂಪೂರ್ಣ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

2025ರ ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯ ಕುದುರೆ ನಿರ್ವಾಹಕರು ಸಾವನ್ನಪ್ಪಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !