ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಇದರ ಸ್ಮರಣಾರ್ಥ ಇಂದು ರಾಮನಗರದಲ್ಲಿ ಪಾದಯಾಥ್ರೆ ನಡೆಯಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಪಾದಯಾತ್ರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದು, ಸಂಜೆ 5 ರಿಂದ 6ಗಂಟೆವರೆಗೆ ಒಂದು ಗಂಟೆ ಕಾಲ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದೆ.
ರಾಮನಗರದ ಜಿಲ್ಲಾ ಕಚೇರಿಯಿಂದ ಐಜೂರು ಸರ್ಕಲ್‌ವರೆಗೂ ಮೂರೂವರೆ ಕಿಮೀವರೆಗೂ ಪಾದಯಾತ್ರೆ ನಡೆಯಲಿದ್ದು, ಐಜೂರು ಸರ್ಕಲ್ ಬಳಿ ಸಿದ್ದರಾಮಯ್ಯ ಮಾತನಾಡಲಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರೂ ಸಿಎಂ, ಡಿಸಿಎಂಗೆ ಸಾಥ್ ಕೊಡಲಿದ್ದಾರೆ. ಜಿಲ್ಲೆಯಾದ್ಯಂತ 20 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಬರುವ ನಿರೀಕ್ಷೆಯಿದೆ.
ರಾಮನಗರ ಮಾತ್ರವಲ್ಲದೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಜೆ 5ರಿಂದ 6 ಗಂಟೆಯವರೆಗೆ ಒಂದು ಗಂಟೆಗಳ ಕಾಲ ಪಾದಯಾತ್ರೆ ಮಾಡುವ ಮೂಲಕ ಈ ಅಭೂತಪೂರ್ವ ಯಾತ್ರೆಯನ್ನು ನೆನಪಿಸಿಕೊಳ್ಳುವಂತೆ ಡಿಕೆಶಿ ಕರೆ ಕೊಟ್ಟಿದ್ದಾರೆ.
ಐತಿಹಾಸಿಕ ಭಾರತ್ ಐಕ್ಯತಾ ಯಾತ್ರೆ ಪ್ರಾರಂಭವಾಗಿ ಒಂದು ವರ್ಷ ಪೂರೈಸುತ್ತಿದೆ.
ಸೆಪ್ಟೆಂಬರ್ 7ನೇ ತಾರೀಖಿನಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಜೆ 5ರಿಂದ 6 ಗಂಟೆಯವರೆಗೆ ಒಂದು ಗಂಟೆಗಳ ಕಾಲ ಪಾದಯಾತ್ರೆ ಮಾಡುವ ಮೂಲಕ ಈ ಅಭೂತಪೂರ್ವ ಯಾತ್ರೆಯನ್ನು ನೆನಪಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಕರೆ ನೀಡಿದ್ದಾರೆ.ಒಂದು… pic.twitter.com/n8W0WRMBYR
— Karnataka Congress (@INCKarnataka) September 6, 2023