October 16, 2026
Friday, October 16, 2026
spot_img

ವಾರ್‌ ಎಫೆಕ್ಟ್‌ನಿಂದ ಸ್ವತಃ ಕಣ್ಣೀರು ಹಾಕಿದ ಈರುಳ್ಳಿ, ಬೆಲೆ ಪಾತಾಳಕ್ಕೆ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ ಮನುಷ್ಯರಿಗಷ್ಟೇ ಅಲ್ಲದೇ ಈರುಳ್ಳಿಗೂ ತಟ್ಟಿದೆ! ಹೌದು, ಇದರ ಬೆಲೆ ಪಾತಾಳಕ್ಕೆ ಇಳಿದಿದ್ದು, ಸ್ವತಃ ಈರುಳ್ಳಿಯೇ ಕಣ್ಣೀರಿಡುವಂತಾಗಿದೆ.

ರಾಯಚೂರು ಜಿಲ್ಲೆಯ ರೈತರ ಮೊಗದಲ್ಲಿ ಈರುಳ್ಳಿ ಬೆಳೆದ ಸಂತಸವೇ ಇಲ್ಲದಂತಾಗಿದೆ. ಸಾಮಾನ್ಯವಾಗಿ ಸೊಲ್ಲಾಪುರ ಸೇರಿ ಮಹಾರಾಷ್ಟ್ರ ಹಾಗೂ ವಿದೇಶಕ್ಕೆ ರಫ್ತಾಗಬೇಕಿದ್ದ ಈರುಳ್ಳಿ ಹಾಗೇ ರೈತನ ಬಳಿಯೇ ಉಳಿದು ಹೋಗಿದೆ.

ಹೊರರಾಜ್ಯದ ಖರೀದಿದಾರು ಹಾಗೂ ದಲ್ಲಾಳಿಗಳು ಈರುಳ್ಳಿ ಕೊಳ್ಳೋದಕ್ಕೆ ಮುಂದೆ ಬರುತ್ತಿಲ್ಲ. ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 600 ರಿಂದ 800 ಇದೆ. ರಸ್ತೆಗಳಲ್ಲಿ ತರಕಾರಿ ಮಾರುಕಟ್ಟೆಗಳಲ್ಲಿ ನೂರು ರೂಪಾಯಿಗೆ ಆರು ಕೆಜಿಯಂತೆ ಈರುಳ್ಳಿ ಮಾರಾಟವಾಗ್ತಿದೆ.

ಕಡಿಮೆ ಗುಣಮಟ್ಟದ ಈರುಳ್ಳಿಯನ್ನು ಯಾರೂ ಖರೀದಿಗೆ ಕೇಳುತ್ತಿಲ್ಲ ಎನ್ನಲಾಗಿದೆ. ರೈತರು 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತನಿಗೆ ಅಸಲು ಕೂಡ ಸಿಗುತ್ತಿಲ್ಲ. ಈರುಳ್ಳಿ ಸಾಗಣೆಯ ವೆಚ್ಚವೂ ರೈತರಿಗೆ ಭಾರವಾಗಿದೆ. ಬೆಂಬಲ ಬೆಲೆ ಘೋಷಿಸಿ ಈರುಳ್ಳಿ ಖರೀದಿಸಿ ಎಂದು ರೈತರು ಒತ್ತಾಯಿಸಿದ್ದಾರೆ.

Must Read