October 8, 2026
Thursday, October 8, 2026
spot_img

ಆನ್‌ಲೈನ್ ಗೇಮಿಂಗ್ ಹುಚ್ಚು, 300 ದಾಟಿದ ಬಿಪಿ: ಮೆದುಳಿನ ರಕ್ತಸ್ರಾವದಿಂದ ಯುವಕ ಸಾ*ವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಜಿಯಾಬಾದ್‌ನ ಮೂವರು ಸಹೋದರಿಯರ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಆನ್‌ಲೈನ್ ಗೇಮಿಂಗ್ ದುರಂತ ಸಂಭವಿಸಿದೆ. ಪಬ್‌ಜಿ ಗೇಮ್ ಆಡುತ್ತಿದ್ದ ಯುವಕನೊಬ್ಬ ತೀವ್ರ ರಕ್ತದೊತ್ತಡದಿಂದಾಗಿ ಸಾವನ್ನಪ್ಪಿದ್ದಾನೆ.

ಮೀರತ್‌ನ ಖೈರ್‌ನಗರದ ನಿವಾಸಿ, ಪ್ರಾಪರ್ಟಿ ಡೀಲರ್ ಫಾರುಕ್ ಅವರ ಪುತ್ರ ಮೊಹಮ್ಮದ್ ಕೈಫ್ (22) ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ ಕೈಫ್, ಹಗಲು-ರಾತ್ರಿ ಎನ್ನದೆ ಮೊಬೈಲ್‌ನಲ್ಲೇ ಮುಳುಗಿರುತ್ತಿದ್ದ. ಶುಕ್ರವಾರ ತಡರಾತ್ರಿ 3 ಗಂಟೆಯವರೆಗೂ ಪಬ್‌ಜಿ ಆಡುತ್ತಿದ್ದಾಗ ಆತ ದಿಢೀರನೆ ಕುಸಿದು ಬಿದ್ದಿದ್ದಾನೆ.

ಶಬ್ದ ಕೇಳಿ ಧಾವಿಸಿದ ಮನೆಯವರು ಕೈಫ್‌ನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆಗ ಆತನ ರಕ್ತದೊತ್ತಡ ಅಚ್ಚರಿ ಎಂಬಂತೆ 300 ದಾಟಿತ್ತು. ಸ್ಥಿತಿ ಗಂಭೀರವಾಗಿದ್ದರಿಂದ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಎರಡು ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಭಾನುವಾರ ಆತ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ:

ನಿರಂತರ ಗೇಮಿಂಗ್‌ನಿಂದ ಉಂಟಾದ ತೀವ್ರ ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆಯೇ ಈ ಸಾವಿಗೆ ಪ್ರಮುಖ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ರಕ್ತದೊತ್ತಡ ವಿಪರೀತವಾಗಿ ಹೆಚ್ಚಿ, ಮೆದುಳಿನ ರಕ್ತಸ್ರಾವ ಉಂಟಾಗಿ ಯುವಕ ಮೃತಪಟ್ಟಿದ್ದಾನೆ.

Must Read