ಈ ಹಿಂದೆ ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಮೆತ್ತನೆಯ ಬಟ್ಟೆಯನ್ನೇ ಪ್ಯಾಡ್ ರೀತಿ ಬಳಕೆ ಮಾಡುತ್ತಿದ್ದರು, ಆದರೆ ಅದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಾದ ನಂತರ ಇದೀಗ ಮಹಿಳೆಯರು ಪ್ಯಾಡ್ ಬಳಕೆ ಮಾಡ್ತಾರೆ. ಆದರೆ ಪ್ಯಾಡ್‌ಗಿಂತ ಬೆಸ್ಟ್ ಆಪ್ಷನ್ ಮೆನಸ್ಟ್ರ್ಯುಯಲ್ ಕಪ್. ಹೌದು, ಹೇಗೆ ನೋಡಿ…
- ಪ್ಯಾಡ್, ಟ್ಯಾಂಪೊನ್ಸ್‌ಗಳಿಗಿಂತ ಕಡಿಮೆ ಬೆಲೆಗೆ ಮೆನಸ್ಟ್ರ್ಯುಯಲ್ ಕಪ್ ಸಿಗಲಿದೆ.
- ಅತಿ ಹೆಚ್ಚು ಬಾಳಿಕೆ ಬರುತ್ತದೆ, ಪದೇ ಪದೆ ಇದನ್ನು ಬಳಸಬಹುದು ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲ.
- ಪ್ಯಾಡ್ ಬಳಸಿ ಆಗುವ ಇರಿಟೇಷನ್, ವೆಜೈನಲ್ ಡ್ರೈನೆಸ್ ಮೆನಸ್ಟ್ರ್ಯುಯಲ್ ಕಪ್ ಬಳಕೆಯಿಂದ ಆಗೋದಿಲ್ಲ.
- ಕೆಲವೊಮ್ಮೆ ಪ್ಯಾಡ್ ಸರಿಯಾಗಿ ಹಾಕದೇ ಅಥವಾ ಹೆಚ್ಚು ಬ್ಲೀಡಿಂಗ್ ಆದಾಗ ಲೀಕ್ ಆಗಿ ಮುಜುಗರಕ್ಕೊಳಗಾಗಿರಬಹುದು. ಆದರೆ ಮೆನಸ್ಟ್ರ್ಯುಯಲ್ ಕಪ್‌ನಲ್ಲಿ ಲೀಕ್ ಆಗೋದಿಲ್ಲ. ವಾಸನೆಯೂ ಬರೋದಿಲ್ಲ.
- ನಾಲ್ಕೈದು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾವಣೆ ಮಾಡಬೇಕು, ಆದರೆ ಮೆನಸ್ಟ್ರ್ಯುಯಲ್ ಕಪ್ ಹೆಚ್ಚು ಸಮಯ ಬಳಸಬಹುದಾಗಿದೆ.
- ಪ್ಯಾಡ್ ಬಳಕೆ ಮಾಡುವುದರಿಂದ ಸ್ಪೋರ್ಟ್ಸ್ ಅಥವಾ ಇನ್ಯಾವುದೇ ಫಿಸಿಕಲ್ ಚಟುವಟಿಕೆ ಮಾಡುವಾಗ ಕಿರಿಕಿರಿ ಆಗಬಹುದು, ಆದರೆ ಮೆನಸ್ಟ್ರ್ಯುಯಲ್ ಕಪ್ ಬಳಕೆಯಿಂದ ಸ್ವಿಮ್ಮಿಂಗ್ ಕೂಡ ಮಾಡಬಹುದು, ಅಷ್ಟು ಕಂಫರ್ಟಬಲ್ ಆಗಿರುತ್ತದೆ.
- ದೊಡ್ಡ ದೊಡ್ಡ ಪ್ಯಾಡ್‌ಗಳನ್ನು ಹೊತ್ತುಕೊಂಡು ಹೋಗೋಕೆ ಕಷ್ಟ ಆದರೆ ಮೆನಸ್ಟ್ರ್ಯುಯಲ್ ಕಪ್ ಪ್ಯಾಂಟ್ ಜೇಬಿನಲ್ಲಿಯೂ ಇಟ್ಟುಕೊಳ್ಳಬಹುದು.
- ಜೀವಿತಾವಧಿಯಲ್ಲಿ ಎಷ್ಟೊಂದು ಪ್ಯಾಡ್ ಬಳಕೆ ಮಾಡುತ್ತೇವೆ ಇದರಿಂದ ಪ್ಲಾಸ್ಟಿಕ್ ವೇಸ್ಟ್ ಹೆಚ್ಚಾಗುತ್ತದೆ. ಮೆನಸ್ಟ್ರ್ಯುಯಲ್ ಕಪ್ ಬಳಕೆಯಿಂದ ಪರಿಸರದ ಬಗ್ಗೆ ಕಾಳಜಿ ಮಾಡಿದಹಾಗೆಯೂ ಆಗುತ್ತದೆ.