September 16, 2026
Wednesday, September 16, 2026
spot_img

ಸಲ್ಮಾನ್‌ಗೆ ಬುದ್ಧಿ ಹೇಳೋಕೆ ತಂಗಿಯಿಂದ ಮಾತ್ರ ಸಾಧ್ಯ: ಏನಿದು ಉಲ್ಟಾ ಆರತಿ ವೈರಲ್ ಕಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಏನೇ ಮಾಡಿದ್ರೂ ಅದೊಂಥರಾ ಸ್ಪೆಷಲ್ ಸುದ್ದಿ ಆಗುತ್ತೆ. ತಮ್ಮ ಸೋಹೇಲ್ ಖಾನ್ ಮನೆಗೆ ಗಣಪತಿ ಪೂಜೆಗೆ ಸಲ್ಲು ಭಾಯ್ ತೆರಳಿದ್ದರು. ಪ್ರಿಂಟೆಡ್ ಜೀನ್ಸ್, ಮ್ಯಾಚಿಂಗ್ ಜಾಕೆಟ್, ಬ್ಲ್ಯಾಕ್ ಟೀ-ಶರ್ಟ್ ಮತ್ತೆ ತಲೆಗೊಂದು ಬ್ಲ್ಯಾಕ್ ಬೀನಿ ಹ್ಯಾಟ್ ಹಾಕೊಂಡು ಫುಲ್ ಕ್ಯಾಶುಯಲ್ ಲುಕ್‌ನಲ್ಲಿ ಭಾಯ್‌ಜಾನ್ ಸಖತ್ ಹ್ಯಾಂಡ್‌ಸಮ್ ಆಗಿ ಕಾಣಿಸ್ತಾ ಇದ್ರು. ಮನೆ ಡೋರ್ ಹತ್ತಿರ ಬರ್ತಿದ್ದಂಗೆನೇ ಅಳಿಯ ಅರ್ಹಾನ್ ಖಾನ್ ಬಂದು ಅವರಿಗೆ ವೆಲ್‌ಕಮ್ ಮಾಡಿದ್ರು.

ಆದ್ರೆ ನಿಜವಾದ ರಂಪಾಟ ಶುರುವಾಗಿದ್ದೇ ಗಣಪತಿಗೆ ಆರತಿ ಮಾಡುವಾಗ. ಸಲ್ಲು ಭಾಯ್ ಪೂಜೆಯ ಭಕ್ತಿಯಲ್ಲಿ ಮುಳುಗಿ ಆರತಿ ತಟ್ಟೆಯನ್ನು ‘ಉಲ್ಟಾ’ ತಿರುಗಿಸೋಕೆ ಶುರು ಮಾಡಿಬಿಟ್ರು. ಸುತ್ತಲೂ ಜೋರಾಗಿ ಮಂತ್ರ, ಪೂಜೆ ಜಪ ನಡೀತಿತ್ತು. ಪಕ್ಕದಲ್ಲೇ ನಿಂತಿದ್ದ ತಂಗಿ ಅರ್ಪಿತಾ ಖಾನ್ ಇದನ್ನ ತಕ್ಷಣವೇ ಗಮನಿಸಿದಳು. “ಭಾಯ್” ಎಂದು ಕರೆದರೂ ಸಲ್ಲುಗೆ ಆ ಶಬ್ದದಲ್ಲಿ ಕೇಳಿಸಲೇ ಇಲ್ಲ. ತಡಮಾಡದೇ ಅರ್ಪಿತಾ ತಕ್ಷಣ ಮುಂದೆ ಬಂದು ಸಲ್ಮಾನ್ ಕೈಯಲ್ಲಿದ್ದ ಆರತಿ ತಟ್ಟೆಯ ದಿಕ್ಕನ್ನು ಸರಿಪಡಿಸಿದಳು. ಪ್ರಪಂಚಕ್ಕೇ ಡಾನ್ ತರ ಇರೋ ಸಲ್ಮಾನ್ ಖಾನ್, ತಂಗಿ ತಿದ್ದಿದ ತಕ್ಷಣ ಒಂಥರಾ ಕ್ಯೂಟ್ ಆಗಿ ರಿಯಾಕ್ಷನ್ ಕೊಟ್ಟು ಆರತಿಯನ್ನು ಸರಿಯಾಗಿ ಮಾಡೋಕೆ ಶುರು ಮಾಡಿದ್ರು. ಅಷ್ಟೇ ಅಲ್ಲ, ಆರತಿ ಮುಗಿದ ಮೇಲೆ ತಮ್ಮ ಮುದ್ದಿನ ಸೊಸೆಗೂ ಆರತಿ ಹೇಗೆ ಮಾಡಬೇಕು ಎಂದು ಪ್ರೀತಿಯಿಂದ ಹೇಳಿಕೊಟ್ರು.

https://www.instagram.com/reel/DdUelmEpTNT/?utm_source=ig_web_button_share_sheet

ಪೂಜೆ ಮುಗಿದ ಮೇಲೆ ಸಲ್ಮಾನ್ ತಮ್ಮ ಚಿಕ್ಕಮ್ಮ ಹೆಲನ್ ಹಾಗೂ ಬಂದಿದ್ದ ಅತಿಥಿಗಳ ಜೊತೆ ಕುಳಿತು ಹರಟೆ ಹೊಡೆದರು. ಹೊರಗಡೆ ಕಾಯುತ್ತಿದ್ದ ಮೀಡಿಯಾದವರಿಗೆ ಪೋಸ್ ಕೊಟ್ಟುರು.

ಈ ವೀಡಿಯೋ ನೆಟ್‌ನಲ್ಲಿ ವೈರಲ್ ಆಗ್ತಿದ್ದಂತೆ ಫ್ಯಾನ್ಸ್ ಹಲವಾರು ಕಮೆಂಟ್ಸ್ ಮಾಡ್ತಿದ್ದಾರೆ. “ಇಡೀ ಜಗತ್ತೇ ಸಲ್ಮಾನ್‌ಗೆ ಹೆದರಬಹುದು, ಆದ್ರೆ ಸಲ್ಮಾನ್‌ಗೆ ಬುದ್ಧಿ ಹೇಳೋಕೆ ತಂಗಿ ಅರ್ಪಿತಾಗೆ ಮಾತ್ರ ಧೈರ್ಯ ಇರೋದು!”, “ಅಣ್ಣ-ತಂಗಿ ಬಾಂಡಿಂಗ್ ಅಂದ್ರೆ ಹೀಗಿರಬೇಕು”, “ತಂಗಿಯರ ಮಾತು ಮಾತ್ರ ಅಣ್ಣಂದಿರು ಕೇಳ್ತಾರೆ” ಎಂದು ಅಭಿಮಾನಿಗಳು ಈ ಮುದ್ದಾದ ವೀಡಿಯೋ ನೋಡಿ ಫುಲ್ ಫಿದಾ ಆಗಿದ್ದಾರೆ.

ಒಟ್ಟಿನಲ್ಲಿ, ಗಣೇಶ ವಿಸರ್ಜನೆಯಲ್ಲಿ ಖಾನ್ ಫ್ಯಾಮಿಲಿ ಒಗ್ಗಟ್ಟು ಮತ್ತು ಸಲ್ಲು-ಅರ್ಪಿತಾ ಅವರ ಬಾಂಧವ್ಯ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !